ಕಪ್ಪು ಅವರೆಕಾಳು ಸಾರು

ಬೇಕಾಗುವ ಸಾಮಗ್ರಿಗಳು

*ಅವರೆಕಾಳು – ೧ ಪಾವು
*ಒಣಕೊಬ್ಬರಿ- ೧/೪
*ಗಸಗಸೆ – ೧ ಚಮಚ
*ಬೆಳುಳ್ಳಿ – ೧೦ ಪೀಸ್
*ಶುಂಠಿ – ೧ ಇಂಚಿನಷ್ಟು
*ಈರುಳ್ಳಿ – ೧
*ಟೊಮೆಟೊ – ೧
*ಅಚ್ಚಖಾರದ ಪುಡಿ – ೧ ಚಮಚ
*ಅರಿಶಿಣ -೧/೪ ಚಮಚ
*ಕೊತ್ತಂಬರಿ ಸೊಪ್ಪು –
*ಧನಿಯಾ ಪುಡಿ – ಒಂದೂವರೆ ಚಮಚ
*ಉಪ್ಪು –
*ಎಣ್ಣೆ – ೫೦ ಗ್ರಾಂ
*ನೀರು –

ಮಾಡುವ ವಿಧಾನ :

ಒಣಕೊಬ್ಬರಿಯನ್ನು ಕಪ್ಪು ಬಣ್ಣಕ್ಕೆ ಬರುವ ಹಾಗೆ ಸುಟ್ಟು ಅದರ ಮೇಲೆ ಒಂದು ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಜಜ್ಜಿಕೊಳ್ಳಿ. ಇದಕ್ಕೆ ಗಸಗಸೆ, ಚಕ್ಕೆ, ಲವಂಗ, ಈರುಳ್ಳಿ, ಶುಂಠಿ, ಬೆಳುಳ್ಳಿ, ಟೊಮ್ಮಾಟೊ, ಖಾರದ ಪುಡಿ, ಧನಿಯಾ ಪುಡಿಯೊಂದಿಗೆ ಒಂದು ಕಪ್ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕುಕ್ಕರ್‌ನಲ್ಲಿ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಈರುಳ್ಳಿ, ಅರಿಶಿಣ ಪುಡಿ ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ಅವರೆಕಾಳು ಹಾಕಿ ಚೆನ್ನಾಗಿ ಪ್ರೈ ಮಾಡಿ ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಬೇಯಿಸಿ, ರುಚಿಗೆ ತಕ್ಕಷ್ಟು ಉಪ್ಪು, ನೀರು ಸೇರಿಸಿ ೨ ವಿಷಲ್ ಕೂಗಿ ಬಿಸಿ ಅನ್ನ ಅಥವಾ ಮುದ್ದೆ ಜೊತೆ ಬಡಿಸಿ.