ಕಪ್ಪಗಲ್ಲು ಗ್ರಾಮದಲ್ಲಿ ತೊಗಲುಗೊಂಬೆ ಪ್ರದರ್ಶನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.27: ಶಿವಶ್ರೀ ಸಾರ್ವಜನಿಕ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಂದ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಾಯೋಜಿತ ಹುಲಿಗೆಮ್ಮ ಮತ್ತು ತಂಡದವರಿಂದ ದಶಕಂಠ ರಾವಣ ಶಿವನ ಆತ್ಮಲಿಂಗ ತೊಗಲುಗೊಂಬೆ ಪ್ರದರ್ಶನ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದ ಬಯಲು ವೇದಿಕೆಯಲ್ಲಿ ನಡೆಯಿತು.  ಕಾರ್ಯಕ್ರಮದಲ್ಲಿ ಗ್ರಾಮ ಮುಖಂಡ ಬಸವ ಮಾತನಾಡುತ್ತ, ತೊಗಲುಗೊಂಬೆ ಪ್ರದರ್ಶನವು ಅತ್ಯಂತ ಪುರಾತನ ಕಲೆಯಾಗಿದ್ದು, ಇದನ್ನು ಇಂದಿನ ಯುವಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. ಟ್ರಸ್ಟ್‍ನ ಅಧ್ಯಕ್ಷರಾದ ಬಿ.ಶಿವರಾಜಗೌಡ ಅವರು ಮಾತನಾಡುತ್ತಾ, ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನ ಮಾಡುವುದರ ಮೂಲಕ ಕಲೆಯನ್ನು ಉಳಿಸಿಕೊಂಡು ಬರಬೇಕೆಂದರು. ಹಿರಿಯ ಛಾಯಾಗ್ರಹಕ ತಿಪ್ಪೇಸ್ವಾಮಿ, ಗ್ರಾಮದ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.