ಕಪ್ಪಗಲ್ಲು ಗ್ರಾಮದಲ್ಲಿ ಎಸ್ ಆರ್ ಎಂ ಗ್ರೂಪ್ ನಿಂದ ಸ್ಯಾನಿಟೈಜೇಷನ್

ಬಳ್ಳಾರಿ, ಮೇ.19: ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ ಕೊರೋನಾ ಮುಕ್ತವಾಗಿ ಮಾಡಲು ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಎಸ್.ಆರ್.ಎಂ ಗ್ರೂಪ್ ನಿಂದ
ಸ್ಯಾನಿಟೈಸರ್ ಮೊದಲಾದವುಗಳ ಕಿಟ್ ವಿತರಿಸಲಾಯಿತು‌
ಅಲ್ಲದೆ ಗ್ರಾಮದ ಎಲ್ಲಾ ಬೀದಿಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು. ಇದಕ್ಕೆ ಬಿಜೆಪಿ ಮುಖಂಡ ಕೆ.ಎ. ರಾಮಲಿಂಗಪ್ಪ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಟಿ.ಡಿ.ಓ. ಗ್ರಾ.ಪಂ ಅದ್ಯಕ್ಷರು, ಉಪಾಧ್ಯಕ್ಷರು, ಗ್ರಾ.ಪಂ.ಸದಸ್ಯರು, ಆರೋಗ್ಯ ಸಹಾಯಕಿ,ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಈ ಎಲ್ಲಾ ಸೆನೀಟೈಜರ್ ಮತ್ತು ಕಿಟ್ ಗಳನ್ನು ಶ್ರೀ ಎಸ್.ಆರ್.ಎಂ. ಗ್ರೂಪ್ ಮಾಲಿಕ ಕೆ.ಆರ್.ಮಧು ಅವರು ನೀಡಿದ್ದಾರೆ