ಕಪ್ಪಗಲ್ಲಿನಲ್ಲಿ ಗೃಹ ಜ್ಯೋತಿ ನೋಂದಣಿಗೆ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ಕುರುಗೋಡು-ಕೋಳೂರು ಅಸಂಘಟಿತ ಕಾರ್ಮಿಕ ವಿಭಾಗದ ಬ್ಲಾಕ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ನೇತೃತ್ವದಲ್ಲಿ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಯ “ಗೃಹ ಜ್ಯೋತಿ” ಯೋಜನೆಗೆ ಜನರಿಂದ ಉಚಿತ ನೋಂದಣಿ ಮಾಡಿಸುವ ಕಾರ್ಯ ನಡೆಯಿತು
ಈ ಕಾರ್ಯಕ್ರಮದಲ್ಲಿ ಜೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ, ಕೆ.ಮಧುಕುಮಾರ್, ಬಸವರಾಜ, ನಾಗರಾಜ ಮತ್ತು ಕಪ್ಪಗಲ್ಲು ಗ್ರಾಮಸ್ಥರು ಭಾಗಿಯಾಗಿದ್ದರು.