ಕಪಿಲ್ ದೇವ್ ದಾಖಲೆ ಮುರಿದ ಬುಮ್ರಾ, ವೇಗವಾಗಿ 100 ವಿಕೆಟ್ ಗಳಿಸಿ ಸಾಧನೆ

ಓವಲ್​(ಲಂಡನ್​), ಸೆ.6- ಟೀಂ ಇಂಡಿಯಾದ ವೇಗದ ಬೌಲರ್​​ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತದ ಮಾಜಿ ನಾಯಕ ​ ಕಪಿಲ್​ ದೇವ್ ದಾಖಲೆಯನ್ನು ಮುರಿದಿದ್ದಾರೆ.
ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​​ ಪಂದ್ಯದಲ್ಲಿ ಬುಮ್ರಾ ಬ್ಯಾಟ್ಸ್‌ಮನ್​​ ಒಲಿ ಪೋಪ್​ ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಟೆಸ್ಟ್​​ನಲ್ಲಿ ವೇಗವಾಗಿ 100 ವಿಕೆಟ್​ ಕಬಳಿಸಿದ ಭಾರತದ ಮೊದಲ ಬೌಲರ್​ ಎಂಬ ಸಾಧನೆ ಮಾಡಿದರು. ಕಪಿಲ್ ದೇವ್​ 25 ಟೆಸ್ಟ್​​ ಪಂದ್ಯಗಳಿಂದ 100 ವಿಕೆಟ್ ಪಡೆದುಕೊಂಡಿದ್ದರು.
ಬುಮ್ರಾ 24 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಕಪಿಲ್ ದೇವ್ 25 , ಇರ್ಪಾನ್ ಪಠಾಣ್ 28, ಮೊಹ್ಮದ್ ಶಮಿ 29, ಜಾವಗಲ್ ಶ್ರೀನಾಥ್ 30 ಹಾಗೂ ಇಶಾಂತ್ ಶರ್ಮಾ 33 ಟೆಸ್ಟ್ ಗಳಲ್ಲಿ 100 ವಿಕೆಟ್ ಗಳಿಸಿದ್ದರು.