ಕಪಿಲಾ ನದಿ ಇದ್ದರೂ ನೀರಿಲ್ಲದೆ ಒಣಗುತ್ತಿರುವ ದೇವಸ್ಥಾನದ ಪಾರ್ಕ್

ನಂಜನಗೂಡು: ಜ.14:- ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಪಾರ್ಕ್ ನೀರಿಲ್ಲದೆ ಒಣಗುತ್ತಿದೆ ಮತ್ತು ಕಸದ ರಾಶಿಯಿಂದ ಗಬ್ಬುನಾರುತ್ತಿದೆ.
ಶ್ರೀ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಶಿವನ ಸ್ಟ್ಯಾಚ್ಯು ಸುತ್ತ ನಿರ್ಮಿಸಿರುವ ಲಕ್ಷಗಟ್ಟಲೆ ಖರ್ಚು ಮಾಡಿ ನೂತನ ಪಾರ್ಕ್ ನಿರ್ಮಾಣ ಮಾಡಿದರೂ ನೀರಿಲ್ಲದೆ ಮತ್ತು ಸ್ವಚ್ಛತೆ ಇಲ್ಲದೆ ಹಾಳಾಗುತ್ತಿದೆ.
ತೋಟಗಾರಿಕೆ ಕೆಲಸಕ್ಕೆ ಇದ್ದರೂ ಕೂಡ ಯಾರೂ ಕೂಡ ಈ ಕಡೆ ಗಮನ ಹರಿಸುತ್ತಿಲ್ಲ ದೇವಸ್ಥಾನದ ಸಂಬಂಧಪಟ್ಟ ಅಧಿಕಾರಿಗಳು ಕೂಡ ಕಚೇರಿಯಿಂದ ಕೆಳಗಿಳಿಯದೆ ಕಾಲಕಳೆಯುತ್ತಿದ್ದಾರೆ ಅಧಿಕಾರಿಗಳು ದೇವಸ್ಥಾನದ ಸುತ್ತ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಸುತ್ತಾಡಿದರೆ ದೇವಸ್ಥಾನದ ಸುತ್ತ ಆಗಿರುವ ಕೆಲಸಗಳನ್ನು ತಿಳಿದುಕೊಳ್ಳಬಹುದು ತಕ್ಷಣ ಕ್ರಮ ಕೈಗೊಳ್ಳಬಹುದು ಇದನ್ನು ಯಾವುದನ್ನು ಮಾಡದೆ ಕಚೇರಿ ಮತ್ತು ದೇವಸ್ಥಾನದ ಒಳಗಡೆ ಕಾಲ ಕಳೆಯುತ್ತಿದ್ದಾರೆ ಎಂದು ಭಕ್ತಾದಿಗಳು ದೂರಿದ್ದಾರೆ.
ದೇವಸ್ಥಾನದ ಆಸುಪಾಸಿನ ಸುತ್ತ ಸ್ವಚ್ಛತೆ ಮಾಡಿಸುವಲ್ಲಿ ಮೇಸ್ತ್ರಿ ಕೂಡ ಕೈಚೆಲ್ಲಿ ಕುಳಿತಿದ್ದಾರೆ. ಶಿವನ ಸ್ಟಾಚ್ಯೂ ಸುತ್ತ ಬಿದ್ದಿರುವ ಟೀ ಕುಡಿದ ಲೋಟಗಳು ಬಿದ್ದು ಗಬ್ಬುನಾರುತ್ತಿದೆ ಗಾಳಿಬೀಸಿದರೆ ಶಿವನ ಸ್ಟಾಚು ಮೇಲೆ ಹಾರಾಡುತ್ತಿವೆ ಇದನ್ನು ತಪ್ಪಿಸುವುದು ಯಾರು. ಭಕ್ತಾದಿಗಳ ಹಣದಿಂದ ನಿರ್ಮಿಸಿರುವ ಪಾರ್ಕುಗಳನ್ನು ರಕ್ಷಿಸುವವರು ಯಾರು ಎಂಬುದೇ ಪ್ರಶ್ನೆಯಾಗಿದೆ.
ತೋಟಗಾರಿಕೆ ಕೆಲಸದವರು ಯಾವ ಕೆಲಸ ಮಾಡುತ್ತಿದ್ದು ಸಂಬಳ ಪಡೆಯುತ್ತಿದ್ದಾರೆ ಗೊತ್ತಿಲ್ಲ ಪ್ರತಿದಿನ ಬೆಳಗ್ಗೆ ಸ್ವಚ್ಛತೆಯ ಮಾಡುವ ಕಾರ್ಮಿಕರು ಕೂಡ ಎಲ್ಲಿ ಸ್ವಚ್ಛತೆ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.
ಅಧಿಕಾರಿಗಳೇ ಕಚೇರಿಯಿಂದ ಹೊರಬಂದು ದೇವಸ್ಥಾನದ ಸುತ್ತ ಸುತ್ತಾಡಿ ಕೆಲಸ ಮಾಡದೆ ಇರುವ ವಿರುದ್ದ ಕ್ರಮ ಕೈಗೊಳ್ಳಿ ಶ್ರೀ ಶ್ರೀಕಂಠೇಶ್ವರ ದೇವಾಲಯದ ಸುತ್ತ ಸ್ವಚ್ಛತೆಯಿಂದ ಇರಲು ಕಾಪಾಡಿ ಕೋವಿಡ್ ಮೂರನೇ ಅಲೆ ಮಿತಿಮೀರಿದೆ ಮುಂದಾದರೂ ಅಧಿಕಾರಿಗಳು ಕೆಲಸ ಮಾಡದೆ ಇರುವವರನ್ನು ಗಮನಿಸಿ ಕ್ರಮ ಕೈಗೊಳ್ಳುವರೇ ಲಕ್ಷಾಂತರ ಖರ್ಚು ಮಾಡಿ ನಿರ್ಮಿಸಿರುವ ಪಾರ್ಕನ್ನು ರಕ್ಷಿಸಿ ಉತ್ತಮ ಪಾರ್ಕ ಉಳಿಸಿಕೊಳ್ಳಬೇಕೆಂದು ಭಕ್ತಾದಿಗಳು ಒತ್ತಾಯವಾಗಿದೆ.