ಕಪಾಳಕ್ಕೆ ಹೊಡೆದು ಮೊಬೈಲ್ ಹಣ ಕಸಿದು ಪರಾರಿ

ಕಲಬುರಗಿ.ಜೂ 01: ಆಸ್ಪತ್ರೆಗೆಂದು ಹೋಗಲು ಬಂದಿದ್ದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಹೊಡೆದು ಆತನಲ್ಲಿದ್ದ ಮೊಬೈಲ್ ಹಾಗೂ ಹಣ ಕಸಿದುಕೊಂಡು ಪರಾರಿಯಾದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ವರದಿಯಾಗಿದೆ. ಸುಲಿಗೆಗೆ ಒಳಗಾದ ವ್ಯಕ್ತಿಯನ್ನು ಚಿತ್ತಾಪುರ ತಾಲ್ಲೂಕಿನ ಕಾಟಮದೇವರಹಳ್ಳಿ ಗ್ರಾಮದ ಸಿದ್ಧರಾಮಪ್ಪ ತಂದೆ ಕಾಮಣ್ಣ ಯಾಗಾಪೂರ್ (72) ಎಂದು ಗುರುತಿಸಲಾಗಿದೆ.
ರೈತ ಸಿದ್ರಾಮಪ್ಪನು ಡಾ. ಶಿವಾನಂದ್ ಪಾಟೀಲ್ ಅವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಲು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳಿಗ್ಗೆ ಬಂದಿಳಿದು ನಡೆದುಕೊಂಡು ಹೋಗುತ್ತಿರುವಾಗ 20ರಿಂದ 25 ವರ್ಷ ವಯಸ್ಸಿನ ವ್ಯಕ್ತಿ ಎದುರಿಗೆ ಬಂದು ಒಮ್ಮೆಲೆ ವ್ಯಕ್ತಿ ಕೈಯಿಂದ ಎಡಕಪಾಳಕ್ಕೆ ಹೊಡೆದು ಕೈಯಲ್ಲಿದ್ದ 5000ರೂ.ಗಳ ಮೌಲ್ಯದ ರಿಯಲ್ ಮೀ ಕಂಪೆನಿಯ ಮೊಬೈಲ್ ಹಾಗೂ ಮೊಬೈಲ್ ಕವರಿನಲ್ಲಿದ್ದ 3000ರೂ.ಗಳನ್ನು ಕಸಿದುಕೊಂಡು ಓಡಿಹೋದ. ಈ ಕುರಿತು ಸಿದ್ದರಾಮಪ್ಪ ಅವರು ಅಶೋಕ್ ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.