ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹಿರಿಯೂರು.ಜು.24- ಇಲ್ಲಿನ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿಯ ಸಹಕಾರದೊಂದಿಗೆ , ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ  ಲೋಕಕಲ್ಯಾಣಾರ್ಥವಾಗಿ ಶ್ರೀ ಲಲಿತಾ ಸಹಸ್ರನಾಮ ಮತ್ತು ಮಣಿದೀಪ ವರ್ಣನೆ ಪಾರಾಯಣವನ್ನು ಹಮ್ಮಿಕೊಂಡಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು ಹಾಗೂ ವಿಶೇಷವಾಗಿ ಗೋರಂಟಿ ಹಚ್ಚಿಕೊಳ್ಳುವುದು ಮತ್ತು ಕೋಲಾಟ ಕಾರ್ಯಕ್ರಮ ನಡೆಸಿದರು. ನಂತರ ವಿಶೇಷ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷರಾದ ನಾಗಸುಂದರಮ್ಮ ಸುಬ್ಬಣ್ಣ ಶೆಟ್ಟಿ ,ಕಾರ್ಯದರ್ಶಿ ಲತಾ ಮಂಜುನಾಥ್, ಭವಾನಿ ಶ್ರೀನಿವಾಸ್ ಚಂದ್ರವದನ ಸತ್ಯಮೂರ್ತಿ ಸೇರಿದಂತೆ ಆರ್ಯವೈಶ್ಯ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಆರ್ಯವೈಶ್ಯ ಮಂಡಳಿ ಪದಾಧಿಕಾರಿಗಳು ಯುವಜನ ಸಂಘ ಮತ್ತು ಯುವತಿಯರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.