ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಕನ್ನಡ ರಾಜ್ಯೋತ್ಸವ


 ಹಿರಿಯೂರು.ನ. 27: ನಗರದ  ಶ್ರೀ ಕನ್ನಿಕ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಸಮಾಜದ ವತಿಯಿಂದ ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಯುವತಿ ಮಂಡಳಿ ಸಹಯೋಗದಲ್ಲಿ ಕಾರ್ತಿಕ ಮಾಸದ  ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದರ ಅಂಗವಾಗಿ ಶ್ರೀ ಕನ್ನಿಕಾಪರಮೇಶ್ವರಿ ಮಾತೆಗೆ ವಿಶೇಷ ಅಲಂಕಾರ ದೇವಾಲಯದಲ್ಲಿ ಕನ್ನಡ ಬಾವುಟ  ಬಣ್ಣಬಣ್ಣದ ರಂಗೋಲಿಗಳು ಬಿಡಿಸಲಾಗಿತ್ತು ದೀಪೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಭಜನೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಆರ್ಯವೈಶ್ಯ ಮಂಡಳಿ ವಾಸವಿ ಯುವತಿ ಮಂಡಳಿ ವಾಸವಿ ಯುವಜನ ಸಂಘ ಹಾಗೂ ಆರ್ಯವೈಶ್ಯ ಸಮಾಜದ ಅನೇಕ ಯುವ ಮುಖಂಡರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.