ಕನ್ನೂರ ಗ್ರಾಮದಲ್ಲಿ ಕೋವಿಡ್ ನಿಯಮ ಮೀರಿ ಬಡಿಗೆ ಜಾತ್ರೆ ಆಚರಣೆ

ವಿಜಯಪುರ, ಜೂ.7-ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಗಳ ನಿಬರ್ಂಧದ ಮಧ್ಯೆಯೂ ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ನಿಯಮ ಉಲ್ಲಂಘಿಸಿ ನೂರಾರು ಜನರು ಮೂರು ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆ ಆಚರಣೆ ಮಾಡಿದ್ದಾಗಿ ವರದಿಯಾಗಿದೆ.
ಕನ್ನೂರು ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ರೇವಣ್ಣಸಿದ್ಧೇಶ್ವರ ಜಾತ್ರೆ ಆಚರಿಸಲಾಗಿತ್ತದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜಾತ್ರೆ ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ನಿಬರ್ಂಧದ ಮಧ್ಯೆಯೂ ಭಕ್ತರು ಹಾಗೂ ಗ್ರಾಮಸ್ಥರು ಸೇರಿ ಜಾತ್ರೆಯನ್ನು ಮುಗ್ಗಿಸುವುವುದು (ರದ್ದು) ಬೇಡ, ಇದರಿಂದ ಭವಿಷ್ಯದಲ್ಲಿ ಊರಿಗೆ ಕೇಡಾಗಲಿದೆ. ಹೀಗಾಗಿ ಕದ್ದುಮುಚ್ಚಿ ಜಾತ್ರೆ ಮಾಡಲು ಮುಂದಾಗಿ ಭಾನುವಾರ ನಸುಕಿನಲ್ಲಿ ಬಡಿಗೆ ಜಾತ್ರೆ ಆಚರಣೆ ಮಾಡಿದ್ದಾರೆ.
ಭಾನುವಾರ ನಸುಕಿನಲ್ಲಿ ಬಡಿಗೆ ಜಾತ್ರೆ ಆಚರಣೆ ಮಾಡಿದ ಭಕ್ತರು ಹಾಗೂ ಗ್ರಾಮಸ್ಥರು ಸೇರಿ ಜಾತ್ರೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಜಿಲ್ಲಾಡಳಿತ ಹಾಗೂ ಪೆÇಲೀಸರು ಜಾತ್ರೆ ನಡೆಯುವ ವಿಷಯ ತಿಳಿದರೂ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.