ಕನ್ನೂರ ಗುರುಮಠದಿಂದ ಇಪ್ತಿಯಾರಕೂಟ: ಸೋಮನಾಥ ಶಿವಾಚಾರ್ಯ

ವಿಜಯಪುರ,ಏ.10: ಕನ್ನೂರ ಗುರುಮಠದಿಂದ ಇಸ್ಲಾಂ ಬಾಂಧವರಿಗೆ ಪವಿತ್ರ ರಮಜಾನ ಮಾಸದಲ್ಲಿ ಉಪಾಸಿಕರಿಗೆ ಇಪ್ತಿಯಾರಕೂಟ ಏರ್ಪಡಿಸಿ ಭಾವೈಕ್ಯತೆಯ ಸಂದೇಶ ದೇಶಕ್ಕೆ ಸಾರಿದ ಜಗದ್ಗುರು ರಂಭಾಪೂರಿ ಶಾಖಾ ಮಠ ಕನ್ನೂರು ಸದಾ ಸಮಾಜಮುಖಿ ಹೊಸತನ ಕಾರ್ಯಕ್ರಮ ಮಾಡುವಲ್ಲಿ ಗುರುಮಠ ಸಾಕ್ಷಿಯಾಗಿದೆ ಎಂದು ಸೋಮನಾಥ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಕನ್ನೂರಿನ ಜಾಮೀಯಾ ಮಸೀದೆ ಹತ್ತಿರ ಗುರುಮಠ ಕನ್ನೂರ ಪೀಠಾಧ್ಯಕ್ಷರಾದ ಸೋಮನಾಥ ಶಿವಾಚಾರ್ಯರು ಹಾಗೂ ಮಠದ ಭಕ್ತರು ಇಸ್ಲಾಮಿಯರಿಗೆ ಇಪ್ತಿಯಾರಕೂಟ ಏರ್ಪಡಿಸಿ ಮಾತನಾಡಿದರು.
ಇಫ್ತಿಯಾರ ಕೂಟ ಹಿಂದು ಮುಸ್ಲಿಂ ಸಮಾಜಗಳ ನಡುವೆ ಭಾವೈಕ್ಯತೆ ಬೆಸೆಯುವಲ್ಲಿ ಹೆಚ್ಚು ಮಹತ್ವ ಪಡೆದಿದೆ ಎಂದರು.
ಕನ್ನೂರ ಇಸ್ಲಾಮ ಮುಖಂಡರಾದ ಇಸಾಕ ಪಠಾಣ ಮಾತನಾಡಿ, ಗ್ರಾಮದ ಎಲ್ಲ ಧರ್ಮಿಯರು ಅತ್ಯಂತ ಪ್ರೀತಿ ಮಮತೆಯಿಂದ ಬಾಳುತ್ತಿದ್ದೇವೆ. ಕನ್ನೂರಿನ ಗುರುಮಠದ ಪೀಠಾಧ್ಯಕ್ಷರಾದ ಸೋಮನಾಥ ಶಿವಾಚಾರ್ಯರು ಸಾಮರಸ್ಯದ ಕಾರ್ಯ ಭಾವೈಕ್ಯತೆಯ ಸಂದೇಶ ಸಾರುತ್ತಿದ್ಡಾರೆ. ಇಂದು ಇಪ್ತಿಯಾರಕೂಟ ಎರ್ಪಡಿಸಿ ಸದ್ಭಾವನೆ ಮೂಡಿಸುತ್ತಿದ್ದಾರೆ. ಕನ್ನೂರ ಗ್ರಾಮ ಆಧ್ಯಾತ್ಮಿಕ ಚಿಂತನೆಗಳಿಂದ ಜಿಲ್ಲೆಗೆ ಮಾದರಿಯಾಗುವಲ್ಲಿ ಅವರ ಪ್ರಯತ್ನ ಪ್ರಶಂಸನೀಯ ಎಂದರು.
ಸಕೀಲ ಮದಭಾವಿ. ಜಟ್ಟಿಂಗೇಶ್ವರ ಪಾಂಡು. ಅಬ್ದುಲ್ ದೇವರ. ಹುಸೇನ ಮೈಯಾರ. ರಫೀಕ ಪಠಾಣ, ಕಲ್ಲಪ್ಪ ಬೆಳ್ಳುಂಡಗಿ, ಶಿವಾನಂದ ಡೊಳ್ಳಿ, ಅಪ್ಪಾಸಾಹೇಬ ಬಂಡಿ, ಈರಪ್ಪ ಬೆಳ್ಳುಂಡಗಿ, ರುದ್ರಗೌಡ ಪಾಟೀಲ, ಯಲಗೊಂಡ ಬಿರಾದಾರ. ಶರಣು ಬೆಳ್ಳುಂಡಗಿ. ಇಸಾಕ ಜಮಾದಾರ. ಹುಸೇನಪೀರ ಪಠಾಣ. ಮಸಾಕ ಚೌಧರಿ. ಸಂಜೀವ ಯಾದವಾಡ ಮುಂತಾದವರು ಉಪಸ್ಥಿತರಿದ್ದರು