ಕನ್ನಿಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ.23 ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಮೇ.24,25 ರಂದು ಶ್ರೀ ಬೀರಲಿಂಗೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಶ್ರೀ ಬೀರಲಿಂಗೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್ ತಿಳಿಸಿದರು.
 ಗ್ರಾಮದ ದೇವಸ್ಥಾನದ ಹತ್ತಿರ ಇಂದು ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ನೂತನವಾಗಿ ಮೂರು ಬೀರಲಿಂಗೇಶ್ವರ ದೇವಸ್ಥಾನ ಸ್ಥಾಪಿಸಲಾಗಿದೆ. ಈ ಗ್ರಾಮದಲ್ಲಿ ಊರಿನ ಎಲ್ಲಾ ಸಮುದಾಯದೊಂದಿಗೆ ದೇವಸ್ಥಾನ ನಿರ್ಮಿಸಿದ್ದು ಈ ಒಂದು ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಕನಕ ಗುರು ಪೀಠ ಕಾಗಿನೆಲೆ, ಶ್ರೀ ಸಿದ್ದರಾಮನಂದಪುರಿ ಸ್ವಾಮಿಗಳು ಕನಕ ಗುರು ಪೀಠ ತಿಂಥಣಿ ಬ್ರಿಡ್ಜ ವಹಿಸಲಿದ್ದಾರೆ, ಕಾರ್ಯಕ್ರಮದ ಸಾನಿಧ್ಯ ಸೋಮಶಂಕರ ಮಹಾಸ್ವಾಮಿಗಳು, ಡಾ. ಮಹೇಶ್ವರ ಸ್ವಾಮೀಜಿಗಳು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಲಿದ್ದಾರೆ.
 ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ ನೇಮಿರಾಜ್ ನಾಯ್ಕ್, ಅಧ್ಯಕ್ಷತೆ ಬುಡ್ಡಿ ಬಸವರಾಜ್ ವಿಶೇಷ ಆಹ್ವಾನಿತರು ವೈ. ದೇವೇಂದ್ರಪ್ಪ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ  ಅಯ್ಯಯಾಳಿ ತಿಮ್ಮಪ್ಪ, ಕಾರ್ಯದರ್ಶಿ ಕುರಿ ಶಿವಮೂರ್ತಿ, ಖಜಾಂಚಿ ಆರ್ ಕೊಟ್ರೇಶ್, ಮುಖಂಡರಾದ ಮುಟಗನಹಳ್ಳಿ ಕೊಟ್ರೇಶ್, ಉಲವತ್ತಿ  ಸೋಮಲಿಂಗಪ್ಪ  ಕರಿಗಾರ್ ಚಂದ್ರಪ್ಪ ಮೈಲಾರಪ್ಪ, ಕನ್ನಿಹಳ್ಳಿ  ಚಂದ್ರಶೇಖರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು
 ಟ್ರಸ್ಟ್ ಅಧ್ಯಕ್ಷ ಮುದೇನೂರು ಚಂದ್ರಪ್ಪ ಮಾತನಾಡಿ ಗ್ರಾಮದಲ್ಲಿ ಬಹಳ ವರ್ಷಗಳ ನಂತರ ದೇವಸ್ಥಾನ ನಿರ್ಮಾಣವಾಗಿದೆ ಈ ದೇವಸ್ಥಾನಕ್ಕೆ ಹಲವಾರು ಭಕ್ತರು ಮತ್ತು ಊರಿನ ಎಲ್ಲಾ ಸಮುದಾಯದವರು ಸಹಕರಿಸಿದ್ದಾರೆ ಈ ದೇವಸ್ಥಾನದ ಕಲ್ಲು ಗುಡೆಕೋಟೆಯಿಂದ ತರಿಸಲಾಗಿದೆ.  ಹಂಪಿಯಲ್ಲಿ ಉದ್ಭವ ಗೊಂಡಿರುವ ಲಿಂಗವನ್ನು ಪ್ರತಿಷ್ಠಾಪಿಸಿ ಅಭಿಷೇಕ ನಡೆಸಲಾಗುವುದು. ಗಂಗೆ ಪೂಜೆ ಹಾಗೂ ಗಣ ಹೋಮ ಕುಂಭಮೇಳ ಹಾಗೂ ಧರ್ಮಸಭೆ  ಹಮ್ಮಿಕೊಳ್ಳಲಾಗಿದೆ. 26ರಂದು ಟಗರಿನ ಕಾಳಗ, ಆಯೋಜಿಸಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಜಾತ್ಯತೀತವಾಗಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
 ಈ ಸಂದರ್ಭದಲ್ಲಿ ಮುಖಂಡರಾದ ಜಿ ಕೋಟೆಪ್ಪ, ಗೋಣಿಬಸಪ್ಪ ಹನುಮಂತಪ್ಪ ವಸಂತ ಅಂಜಿನಪ್ಪ ಕೆಬಿ ಪ್ರಶಾಂತ್ ಮುಗಪ್ಪ ಚಂದ್ರಶೇಖರ್ ನೀಲಪ್ಪ ಬೀರಪ್ಪ ಅಲ್ಬೂರ್, ಬಿ ನಾಗರಾಜ್ ಭೀಮಜ್ಜನವರ ನಾಗಪ್ಪ ಶಿಕ್ಷಕ ಪಕೀರಪ್ಪ,  ದೊಡ್ಡಬಸಪ್ಪ ಇತರರಿದ್ದರು