
ಕವಿತಾಳ,ಸೆ.೦೨-
ಕವಿತಾಳ ಪಟ್ಟಣದ ಕಲಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರದಂದು ವಾಸವಿ ಸಮಾಜದ ಬಹುತೇಕ ಮಹಿಳೆಯರು ಹಾಗೂ ಪುರುಷರು ಕೂಡಿಕೊಂಡು ಎರಡನೇ ವರ್ಷದ ರಾಯರ ಮಧ್ಯರಾದಾನಿ ಕಾರ್ಯಕ್ರಮವನ್ನು ಬೆಳಿಗ್ಗೆ ಪ್ರಶ್ನೋತ್ತರ ತುಳಸಿ ಅರ್ಚನೆ ಅಲಂಕಾರ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಜಯತೀರ್ಥ ಆಚಾರ್ಯ ಅವರು ಭಕ್ತಿ ಪೂರ್ವಕವಾಗಿ ಅದ್ದೂರಿಯಾಗಿ ಪೂಜೆ ಸಲ್ಲಿಸಿದರು.
ಮೊದಲಿನಿಂದಲೂ ಕೂಡ ಈಗಲೂ ಮಂತ್ರಾಲಯದಲ್ಲಿ ಪ್ರತಿವರ್ಷ ರಾಯರ ಮಧ್ಯ ಆರಾಧನೆ ಕಾರ್ಯಕ್ರಮ ನಡೆಯುತ್ತಿದ್ದು.
ಈ ಭಾಗದ ವಾಸವಿ ಯೋಜನಾ ಸಂಘ ಹಾಗೂ ಮಹಿಳಾ ಸಂಘಟನೆಯ ಅನೇಕ ಮಹಿಳೆಯರು ಓದು ವರ್ಷ ಆಚರಿಸಿ ಈಗ ಎರಡನೇ ವರ್ಷದ ಆರಾಧನೆ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರಸಾದ ಊಟ ಮಾಡಿ ಬೆಂಗಳೂರಿನಿಂದ ಬಂದವರಿಂದ ಭರತನಾಟ್ಯ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಮುಂದೆ ಕೆಲವೇ ದಿನಗಳಲ್ಲಿ ಈ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ೨ ಕೆ.ಜಿ ತೂಕವಿರುವ ಬೆಳ್ಳಿ ಬೃಂದಾವನವನ್ನು ನೆರವೇರಿಸಲಾಗುವುದು ಎಂದು ವಾಸವಿ ಸಮಾಜದ ಮುಖಂಡರಾದ ಎಲ್ಲೂರು ಉದಯ್ ಕುಮಾರ್ ಮುರಳಿ ರಮೇಶ್ ಹೇಳಿದರು.