
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.26 ಕ್ಷೇತ್ರದಲ್ಲಿ ಈ ಬಾರಿ ನಡೆದ ಚುನಾವಣೆಯಲ್ಲಿ ಸ್ವಾಭಿಮಾನ ಗೆದ್ದಿದೆ. ಐದು ವರ್ಷ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷತೀತವಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಕೆ ನೇಮಿರಾಜ್ ನಾಯಕ್ ಹೇಳಿದರು.
ಕನ್ನಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ಸೇವಾ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನೆನೆಗುದಿಗೆ ಬಿದ್ದಿವೆ ಅವುಗಳನ್ನು ಸಂಪೂರ್ಣ ಮಾಡಲು ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬೇಕಾಗಿದೆ. ಮುಂದಿನ ದಿನಗಳಲ್ಲಿ ಬಡವರಿಗೆ ನಿವೇಶನ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜಾತ್ಯಾತೀತವಾಗಿ ಎಲ್ಲರೂ ನನಗೆ ಬೆಂಬಲಿಸಿದ್ದಾರೆ. ತಾರತಮ್ಯ ಮಾಡದೆ ಎಲ್ಲರಿಗೂ ನ್ಯಾಯ ಒದಗಿಸುತ್ತೇನೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ತಿಂಥಣಿ ಬ್ರಿಡ್ಜ್ ಕನಕ ಗುರು ಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಮಾತನಾಡಿ ದೇವಸ್ಥಾನಗಳು ನಿರ್ಮಾಣದಿಂದ ಜನರಲ್ಲಿ ಭಕ್ತಿ ಭಾವೈಕ್ಯತೆ ಹೆಚ್ಚುತ್ತದೆ. ದೇವಸ್ಥಾನವನ್ನು ಸ್ವಚ್ಛವಾಗಿ ಮತ್ತು ಪೂಜಾ ಪುನಸ್ಕಾರದಿಂದ ಸಂಸ್ಕರಿಸಬೇಕು. ಹಾಲುಮತಸ್ಥರು ಮೂರ್ತಿ ಆರಾಧಕರಲ್ಲ. ದೇವರಿಗೆ ಆಕಾರವಿಲ್ಲ ನಾವು ಮಾಡುವ ಕಾಯಕ ಮತ್ತು ನಿಷ್ಠೆ ಪರಿಶುದ್ಧವಿದ್ದರೆ ದೇವರು ನಮ್ಮ ಸಂಪರ್ಕದಲ್ಲಿ ಇರುತ್ತಾರೆ. ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಪುರೋಹಿತರು ಮಧ್ಯಸ್ಥಿಕೆ ವಹಿಸಿ ದೇವರ ಸಂಪರ್ಕದ ಪೂಜೆ ಪುನಸ್ಕಾರದಿಂದ ಪಾಪ ಪರಿಹಾರ ನೀಡುತ್ತಾರೆ. ಪುರೋಹಿತರಿಂದಲೇ ದೇವರ ಮೇಲೆ ಆಪಾದನೆಗಳು ಸೃಷ್ಟಿಯಾಗಿವೆ ಎಂದರು.
ಉತ್ತಂಗಿ ಮಠದ ಶ್ರೀ ಸೋಮಶಂಕರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಕುರುಬ ಸಂಘದ ಜಿಲ್ಲಾ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುರುಬ ಸಂಘದ ತಾಲೂಕ ಅಧ್ಯಕ್ಷ ಬುಡ್ಡಿ ಬಸವರಾಜ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ ಗಂಗಾಧರ್ ಜೆಡಿಎಸ್ ತಾಲೂಕ್ ಅಧ್ಯಕ್ಷ ವೈ ಮಲ್ಲಿಕಾರ್ಜುನ್, ಮುಖಂಡರಾದ ಮುಟಗನಹಳ್ಳಿ ಕೊಟ್ರೇಶ್, ಕನ್ನಳ್ಳಿ ಚಂದ್ರು, ಭರಮರೆಡ್ಡಿ, ಕೆಬಿ ಫಕ್ಕಿರೆಡ್ಡಿ, ಬಣಕಾರ್ ಗೋಣೆಪ್ಪ, ಎಂಪಿ ಕೊಟ್ರೇಶ್
ಜಿ ಕೋಟೆಪ್ಪ, ಗೋಣಿಬಸಪ್ಪ ಹನುಮಂತಪ್ಪ ವಸಂತ ಅಂಜಿನಪ್ಪ ಕೆಬಿ ಪ್ರಶಾಂತ್ ಮುಗಪ್ಪ ಚಂದ್ರಶೇಖರ್ ನೀಲಪ್ಪ ಬೀರಪ್ಪ ಅಲ್ಬೂರ್, ಬಿ ನಾಗರಾಜ್ ಭೀಮಜ್ಜನವರ ನಾಗಪ್ಪ ಶಿಕ್ಷಕ ಪಕೀರಪ್ಪ, ದೊಡ್ಡಬಸಪ್ಪ ಇತರರಿದ್ದರು