ಕನ್ನಯ್ಯ ಮೇಲೆ ಹಲ್ಲೆ:ಅಭಿಷೇಕ್ ಖಂಡನೆ

ಬೆಂಗಳೂರು,ಮೇ೧೮:ನವದೆಹಲಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನ್ನಯ್ಯಕುಮಾರ್ ಅವರು ಸ್ಪರ್ಧೆ ಮಾಡುತ್ತಿದ್ದು, ಕನ್ನಯ್ಯಕುಮಾರ್ ಅವರ ಆಕ್ರಮಣ ಭಾಷಣ ಸಹಿಸದ ಕೆಲ ಬಿಜೆಪಿ ಅಂಧ ಭಕ್ತರು ಅವರ ಮೇಲೆ ದಾಳಿ ನಡೆಸಿರುವುದನ್ನು ರಾಷ್ಟ್ರೀಯ ಯೂತ್ ಕಾಂಗ್ರೆಸ್‌ನ ಮಾಧ್ಯಮ ಸಹ ಸಲಹೆಗಾರ ವಿ.ಎಸ್ ಅಭಿಷೇಕ್‌ರವರು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಎಲ್ಲರಿಗೂ ಇದೆ. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಆಡಳಿತ ವೈಖರಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿರುವ ಕನ್ನಯ್ಯ ಕುಮಾರ್ ಅವರನ್ನು ಪರೋಕ್ಷವಾಗಿ ಬೆದರಿಸುವ ತಂತ್ರ ಇದಾಗಿದ್ದು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಪ್ರಜಾಪ್ರಭುತ್ವಕ್ಕೆ ಹಾನಿಯಾಗಲಿದೆ. ಚುನಾವಣಾ ಆಯೋಗ ತಕ್ಷಣವೇ ಕ್ರಮ ಕೈಗೊಂಡು ಸೂಕ್ತ ಭದ್ರತೆ ನೀಡಿ ಎಲ್ಲಾ ಪಕ್ಷಗಳಿಂದ ನೀತಿ ಸಂಹಿತೆಯ ಉಲ್ಲಂಘನೆ ಆಗದಂತೆ ತಡೆಯಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಲೋಕಸಮರದಲ್ಲಿ ವಿಕೃತಿ ಮೆರೆಯುತ್ತಿರುವ ಬಿಜೆಪಿ ನವದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯ ಕುಮಾರ್ ಸ್ಪರ್ಧಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದಿದ್ದೆ. ಕನ್ನಯ್ಯ ಕುಮಾರ್ ಅವರ ಆಕ್ರಮಣಕಾರಿ ಭಾಷಣ ಬಿಜೆಪಿಯ ಗೆಲುವಿಗೆ ಮುಳ್ಳಾಗಿ ಪರಿವರ್ತಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಅಂದ ಭಕ್ತರು ಕನ್ನಯ್ಯ ಕುಮಾರ್ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ವೇಳೆ ದಾಳಿ ನಡೆಸುವ ಮೂಲಕ ವಿಕೃತಿ ಮೆರೆದಿದ್ದಾರೆ.