
ಬೆಂಗಳೂರು,ಜ.18- ಕನ್ನಡ ಹೋರಾಟಗಾರರು ರೋಲ್ ಕಾಲ್ ಗಳು ಎಂದು “ಪೆಂಟಗಾನ್ ” ಚಿತ್ರದ ಟೀಸರ್ ನಲ್ಲಿ ಅವಹೇಳನ ಮಾಡಿರುವುದು ವಿವಾದ ಕಿಡಿ ಹೊತ್ತಿಸಿದೆ.
ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ‘ ಅ” ಆ ಕಾರ ಬರದವರು , ಭೂಗತ ದೊರೆಗಳು, ರಜನಿ ಕಾಂತ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಎಷ್ಟು ರೋಲ್ ಕಾಲ್ ಪಡೆದಿದ್ದಾರೆ ಎಂದು ಕನ್ನಡ ಹೋರಾಟಗಾರನ್ನುದ್ದೇಶಿಸಿ ಬಳಿಸಿರುವ ಪದ ವಾದ,ಪ್ರತ್ಯದ್ಯಕ್ಕೆ ಸಾಕ್ಷಿಯಾಯಿತು.
ಕನ್ನಡ ಹೋರಾಟಗಾರರಾದ ರೂಪೇಶ್ ರಾಜಣ್ಣ, ನಟಿ ಹೋರಾಟಗಾರ್ತಿ ಅಶ್ವಿನಿ ಹಾಗು ನಿರ್ಮಾಪಕ ಗುರು ದೇಶಪಾಂಡೆ ನಡುವೆ ವಾದ ,ಪ್ರತಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು
ದಾಖಲೆ ಮುಂದಿಡಿ:
ಎಲ್ಲಾ ಕನ್ನಡ ಹೋರಾಟಗಾರರು ರೋಲ್ ಕಾಲ್ ಗಳಲ್ಲ. ಕೆಲವರು ಇರಬಹುದು. ಗಾಳಿ ಮಾತು ನಂಬಿ ಆರೋಪ ಮಾಡಬೇಡಿ, ನಿಖರ ಮಾಹಿತಿ ನೀಡಿ,ಯಾರು ರೋಲ್ ಕಾಲ್ ಮಾಡಿದ್ದಾರೆ ಅವರ ಹೆಸರು ಹಾಕಿ ಎಲ್ಲರನ್ನೂ ಸರಾಸಗಟಾಗಿ ಆರೋಪ ಮಾಡಬೇಡಿ ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದಾರೆ
ಕನ್ನಡ ಹೋರಾಟಗಾರಿಗೂ ಕುಟುಂಬವಿದೆ. ಕನ್ನಡ ಹೋರಾಟದಲ್ಲಿ ಸಾಕಷ್ಡು ಪ್ರಕರಣ ದಾಖಲಾಗಿವೆ. ಪೊಲೀಸರು ಅಮಾನವೀಯವಾಗಿ ವರ್ತಿಸುತ್ತಾರೆ. ಇಂತಹುದರ ನಡುವೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ ಅಸಂಖ್ಯಾತ ಹೋರಾಟಗಾರಿದ್ದಾರೆ .ಅವರಿಗೆ ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.
ಸುಖಾ ಸುಮ್ಮನೆ ಕನ್ನಡ ಹೋರಾಟಗಾರ ಮೇಲೆ ಆರೋಪ ಮಾಡುವುದನ್ನು ಸಹಿಸಲು ಆಗುವುದಿಲ್ಲ.ನಿಖರ ಮಾಹಿತಿ ಇದ್ದರೆ ದಾಖಲೆ ನೀಡಿ ಎಂದು ಆಗ್ರಹಿಸಿದರು.
ಆರೋಪ ಸಹಿಸಲಾಗದು;
ಇದಕ್ಕೆ ಧ್ವನಿ ಗೂಡಿಸಿದ ನಟಿ ಹಾಗು ಹೋರಾಟಗಾರ್ತಿ ಅಶ್ವಿನಿ,ಕನ್ನಡ ಹೋರಾಟಗಾರನ್ನು ಅವಮಾನ ಮಾಡುವುದನ್ನು ಸಹಿಸಲು ಆಗುವುದಿಲ್ಲ. ಹಲವಾರು ಪ್ರಕರಣ ದಾಖಲಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಪೋಲೀಸ್ ಸ್ಟೇಷನ್ ಗಳಲ್ಲಿ ನಿಂದಿಸುವುದರ ಜೊತೆಗೆ ಕಿರುಕುಳ ನೀಡ್ತಾರೆ ಎಂದರು.
ಸಿನಿಮಾದಲ್ಲಿ ನೋಡಿ:
ಟೀಸರ್ ನಲ್ಲಿ ಹೇಳಿರುವುದಕ್ಕೆ ಸಿನಿಮಾದಲ್ಲಿ ಉತ್ತರ ಕೊಡಲಿದ್ದೇವೆ. ಯಾರು ಯಾರು ಎನ್ನುವುದನ್ನು ಸಿನಿಮಾದಲ್ಲಿ ನೋಡಿ ಎಂದು ನಿರ್ದೇಶಕ ಗುರು ದೇಶಪಾಂಡೆ ಹೇಳಿದ್ದಾರೆ.
ಸಿನಿಮಾ ಮುಂಚೆಯೇ ಎಲ್ಲಾ ತೋರಿಸಿದರೆ ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದರು ಏನಾಗಬೇಕು. ಎಲ್ಲಾ ಆರೋಪಗಳಿಗೆ ಸಿನಿಮಾದಲ್ಲಿ ಉತ್ತರ ಕೊಡುತ್ತೇವೆ. ಕನ್ನಡ ಹೋರಾಟಗಾರರನ್ನು ನೋಡಿರುವುದನ್ನು ಕೇಳಿರುವುದನ್ನು ನೋಡಿ ಸಿನಿಮಾ ಮಾಡಿದ್ದೇನೆ ಎಂದರು.
ಪೊಲೀಸರು ರಾಜಕಾರಣಿಗಳ ಬಗ್ಗೆ ಆರೋಪ ಮಾಡಿದರೆ ಬರದ ಪ್ರಶ್ನೆ ಕನ್ನಡ ಹೋರಾಟಗಾರರ ಬಗ್ಗೆ ಬಂದಾಗ ಯಾಕೆ, ಈ ವಿಷಯ ಚರ್ಚೆ ಆಗಲಿ ಎಂದು ಹೇಳಿದ್ದಾರೆ
ಅವಮಾನ ಕರ ಸಂಗತಿ ಇಲ್ಲ
ಚಿತ್ರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನವಾಗುವ ಯಾವುದೇ ವಿಷಯಗಳಿಲ್ಲ.ಎದ್ದಿರುವ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ಥ ಸಿಗಲಿದೆ ಎಂದು ಬಹುಭಾಷಾ ನಟ ಕಿಶೋರ್ ಹೇಳಿದ್ದಾರೆ.
ಚಿತ್ರದಲ್ಲಿ ಕನ್ನಡ ಪರ ಹೋರಾಟಗಾರರ ಹಾಗು ಭೂಗತ ಲೋಕದ ಡಾನ್ ಪಾತ್ರದಲ್ಲಿ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ