ಕನ್ನಡ ಹೆಸರಾಗಿದೆ ನಮ್ಮೆಲ್ಲಾರ ಉಸಿರಾಗಬೇಕು -ತಹಸೀಲ್ದಾರ್ ಮಹಾಬಲೇಶ್ವರ್.

ಕೂಡ್ಲಿಗಿ.ನ.1:- ಅನೇಕರ ಹೋರಾಟದ ಫಲವಾಗಿ 4ಪ್ರಾಂತ್ಯವಾಗಿ ಹರಿದು ಹಂಚಿ ಹೋಗಿದ್ದ ಕರುನಾಡನ್ನು ಕರ್ನಾಟಕ ಎಂದು ಹೆಸರಾಗಿದ್ದು ಅದು ಪ್ರತಿಯೊಬ್ಬರ ಉಸಿರಾಗಬೇಕಿದೆ ಎಂದು ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ್ ತಿಳಿಸಿದರು.
ಅವರು ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ಮೈಸೂರು, ಹಳೇ ಮೈಸೂರು ಪ್ರಾಂತ್ಯ, ಮುಂಬೈ -ಕರ್ನಾಟಕ, ಹೈದ್ರಾಬಾದ್ -ಕರ್ನಾಟಕ ಎಂಬ 4ಪ್ರಾಂತ್ಯವಾಗಿ ಹರಿದು ಹಂಚಿ ಹೋಗಿದ್ದ ಕರುನಾಡನ್ನು ಒಗ್ಗೂಡಿಸಬೇಕೆಂದು ಕರ್ನಾಟಕ ಏಕೀಕರಣ ಹೋರಾಟ ಆರಂಭಿಸಿ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಕನ್ನಡ ಭಾಷೆ, ನೆಲ, ಜಲ, ಕಲೆ ಮತ್ತು ವಾಸ್ತು ಶಿಲ್ಪಾ ಗಳ ಇತಿಹಾಸಿಕತೆ ಹೊಂದಿರುವ ಕರ್ನಾಟಕ ದೇಶವಲ್ಲದೆ ಜಗತ್ತಿನಲ್ಲಿ ಹೆಸರು ಮಾಡಿದ್ದು ನಾಡು ನುಡಿ ಭಾಷೆ ಉಳಿವಿಗಾಗಿ ನಾವೆಲ್ಲರೂ ಶ್ರಮಿಸುವ ಮೂಲಕ ಕನ್ನಡವನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಪ್ರತಿಯೊಬ್ಬರ ಉಸಿರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕ ಕಚೇರಿ ಸಿಬ್ಬಂದಿಗಳು, ಗೃಹರಕ್ಷಕದಳ ಸಿಬ್ಬಂದಿಗಳು ಉಪಸ್ಥಿತರಿದ್ದರು.