
ಶಹಾಬಾದ್:ನ.2:ನಗರದಲ್ಲಿ ತಾಲೂಕ ಆಡಳಿತದ ವತಿಯಿಂದ ಅದ್ದೊರಿಯಾಗಿ ಆಯೋಜಿಸಿದ್ದ ಸುವರ್ಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ, ತಾಲೂಕ ತಹಶೀಲ್ದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಕನ್ನಡಾಭಿಮಾನಿಗಳು ಹೆಜ್ಜೆ ಹಾಕಿದರು. ಬೆಳಗ್ಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ತಾಪಂ. ಕಚೇರಿ ಆವರಣದಲ್ಲಿ ನಡೆದ 50ನೇ ವರ್ಷದ ಸುವರ್ಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಗುರುರಾಜ ಸಂಗಾವಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದ್ವಜಾರೋಹಣ ನೇರವೇರಿಸಿದರು. ರಾಷ್ಟ್ರಗೀತೆ, ನಾಡಗೀತೆಯ ನಂತರ, ಟ್ಯಾಕ್ಟರ ಮೇಲೆ ಶೃಂಗರಿಸಿದ ಕನ್ನಡಾಂಬೆ ಭಾವಚಿತ್ರಕ್ಕೆ ಪೌರಾಯುಕ್ತೆ ಪಂಕಜಾ ಅವರು ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಶಾಲೆ ವಿದ್ಯಾರ್ಥಿಗಳ, ಬ್ಯಾಂಡ್, ಲೇಜಮ್‍ದೊಂದಗೆ ಮೆರವಣಿಗೆಯೂ ಪ್ರೌಢ ಶಾಲೆಯಿಂದ ರೈಲು ನಿಲ್ದಾಣ, ಭಾರತ ಚೌಕ, ಸರ್ದಾರ ಪಟೇಲ ಚೌಕ, ಸುಭಾಷ ಚೌಕ, ಶಾಸ್ತ್ರಿ ಚೌಕ, ಮುಖ್ಯ ರಸ್ತೆಯ ಮೂಲಕ ಪ್ರೌಢ ಶಾಲೆಗೆ ತಲುಪಿತು. ಮೆರವಣಿಗೆಯಲ್ಲಿ ಪ್ರತಿ ವೃತ್ತದಲ್ಲಿ ಕನ್ನಡ ಹಾಡಿಗೆ ಅಧಿಕಾರಿಗಳು, ಕಸಾಪ ಅಧ್ಯಕ್ಷರಾಗಿಯಾಗಿ ಎಲ್ಲ ಕನ್ನಡಾಭಿಮಾನಿಗಳು ಹೆಜ್ಜೆ ಹಾಕಿ ಖುಷಿ ಪಟ್ಟರು.
ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ ದೀಪ ಬೆಳಗಿಸಿ ಉದ್ಘಾಟಿಸಿದ ಮಾತನಾಡಿ ನೂತನ ತಾಲೂಕವಾದ ಶಹಾಬಾದ್‍ಗೆ ಗ್ರಾಮೀಣ ತಾಲೂಕ ಅರ್ಹತೆ ನೀಡಿದ್ದು, ಅದನ್ನು ಹೋಗಲಾಡಿಸಲು ನಾವು, ಶೈಕ್ಷಣಿಕವಾಗಿ, ಕ್ರೀಡೆ, ವಿವಿಧ ಸ್ಪರ್ಧಾತ್ಮಕವಾಗಿ ಮುಂದೆ ಬಂದು ಗ್ರಾಮೀಣ ಹಣೆ ಪಟ್ಟಿಯನ್ನು ಅಳಿಸುವ ಪ್ರಯತ್ನಕ್ಕೆ ನಾವೇಲ್ಲಾ ಸೇರಿ ಶ್ರಮಿಸೋಣ ಎಂದು ಹೇಳಿದರು.
ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಮಾತನಾಡಿ, ಕನ್ನಡ ಭಾಷೆ ಶೇ.99.99 ರಷ್ಟು ಸಂಪೂರ್ಣ ವೈಜ್ಞಾನಿಕ ಭಾಷೆಯಾಗಿದೆ, ರಾಷ್ಟ್ರ ಭಾಷೆ ಹಿಂದಿಯ ನಂತರ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದ ಭಾಷೆ ಇದಾಗಿದ್ದು, 3ನೇ ರಾಷ್ಟ್ರೀಕೃತ ಭಾಷೆಯಾಗಿರುವದ ನಮ್ಮ ಹೆಮ್ಮೆಯಾಗಿದೆ. ಸುಮಾರು ಎರಡುವರೆ ಸಾವಿರ ವರ್ಷದ ಇತಿಹಾಸ ಕನ್ನಡ ಭಾಷೆಗೆ ಇದೆ ಎಂದು ಹೇಳಿ, ಅದನ್ನು ಉಳಿಸಿ, ಬೆಳೆಸುವ ಕೆಲಸ ನಮ್ಮಿಂದಾಗಬೇಕು
ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಬಾವಿ ಮಾತನಾಡಿದರು. ವೇದಿಕೆ ಮೇಲೆ ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಶಿಶು ಅಭಿವೃದ್ದಿ ಅಧಿಕಾರಿ ಡಾ.ವಿಜಯಲಕ್ಷ್ಮೀ ಹೇರೂರ. ಪ್ರೌರಾಯುಕ್ತೆ ಪಂಕಜಾ ಆಂಜನೇಯ, ಪಶು ವೈದ್ಯಕೀಯ ಸಹಾಯಕ ನಿರ್ಧೇಶಕರಾದ ಯಲ್ಲಪ್ಪ, ಜೆಸ್ಕಾ ಇಎಎ ಯೂನೂಸ್, ಪಿಎಸ್‍ಐ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಹತ್ತನೇ, ಪಿಯುಸಿಯಲ್ಲಿ ಕನ್ನಡದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗದ ಗಣ್ಯರಾದ ಕನಕಪ್ಪ ದಂಡಗುಲರಕ್, ಅಣವೀರ ಇಂಗಿನಶೆಟ್ಟಿ, ಸೂರ್ಯಕಾಂತ ಕೋಬಾಳ. ಶಿವರಾಜ ಕೋರೆ, ನಾಗಪ್ಪ ಬೆಳಮಗಿ, ಶರಣು ಪಗಲಾಪುರ. ಚನ್ನಬಸಪ್ಪ ಕೊಲ್ಲೂರ, ನಿಂಗಣ್ಣ ಹುಳಗೋಳ. ಶರಣು ವಸ್ತ್ರದ, ಕೆ.ರಮೇಶ ಭಟ್ಟ, ವಿಶ್ವನಾಥ ಫಿರೋಜಾಬಾದ್ ಸೇರಿದಂತೆ ಅನೇಕರ ಪಾಲ್ಗೊಂಡಿದ್ದರು.
ವಿವಿಧ ಶಾಲಾ ಮಕ್ಕಳಿಂದ ಕನ್ನಡ ಪರ ಗೀತೆಗಳ ನೃತ್ಯ, ಹಾಡುಗಳ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಬನ್ನಪ್ಪ ಸೈದಾಪುರ ನಿರೂಪಿಸಿದರು. ಜಗನ್ನಾಥ ಹೊಸ್ಮನಿ ಸ್ವಾಗತಿಸಿದರು. ಮರೆಪ್ಪ ಬಂಜತ್ರಿ ಕನ್ನಡ ಪರ ಗೀತೆ ಗಾಯನ ಮಾಡಿದರು.