ಕನ್ನಡ ಸೌರಭ ಕಾರ್ಯಕ್ರಮದಡಿ ರಾಷ್ಟ್ರಕವಿ ಕುವೆಂಪು ಪರಿಚಯ

ಬೀದರ :ನ.7:ತಾಲೂಕಿನ ಸಿಕಿಂದ್ರಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದು ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕ ಬೀದರ ದಕ್ಷಿಣ ಮತ್ತು ಗ್ರಾಮ ವಿಕಾಸ ಟ್ರಸ್ಟ್ ಆಣದೂರ ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಸೌರಭ ಕಾರ್ಯಕ್ರಮದಡಿ ಕನ್ನಡ ರಾಜ್ಯೋತ್ಸವ ನಿಮಿತ್ಯ ರಾಷ್ಟ್ರಕವಿ ಕುವೆಂಪು ರವರ ಜೀವನ ಮತ್ತು ಸಾಧನೆಯನ್ನು ಪರಿಚಯಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗ್ರಾಮ ವಿಕಾಸ ಟ್ರಸ್ಟ್ ಹಾಗೂ ಬೀದರ ದಕ್ಷಿಣ ಕ.ಸಾ.ಪ. ಯುವ ಘಟಕ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿಯವರು ರಾಷ್ಟ್ರಕವಿ ಕುವೆಂಪು ರವರು ಭಾರತೀಯ ಸಾಹಿತ್ಯ ಶ್ರೇಷ್ಠ ಕೊಡುಗೆಯನ್ನು ನೀಡಿದವರು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ನೀಡುವ ಮೂಲಕ ಕರ್ನಾಟಕಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.

ಮೈಸೂರು ಮಹಾರಾಜ ಕಾಲೇಜಿನಿಂದ ವೃತ್ತಿ ಜೀವನ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿಯು ಕಾರ್ಯನಿರ್ವಹಿಸಿದ್ದಾರೆ. ಭಾವಗೀತೆ ಕತೆ, ಕಾದಂಬರಿ, ನಾಟಕ, ಆತ್ಮ ಚಿರಿತ್ರೆ, ವಿಮರ್ಶೆ ಮಕ್ಕಳ ಸಾಹಿತ್ಯ ವಿವಿಧ, ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಪೆ ಮಾಡಿದ್ದಾರೆ. ಕೇಳಲು, ಪ್ರೇಮ ಕಾಶ್ಮಿರ, ಕಾನೂರು ಹೆಗ್ಗಡಲೆ, ನೆನಪಿನ ದೋಣಿಯಲ್ಲಿ, ಮನುಜ ಮತ, ವಿಶ್ವಪಥ ಮುಂತಾದ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ. ಇದರೊಂದಿಗೆ ಕುವೆಂಪುರವರು ವಿಶ್ವಮಾನವತ್ವದ ಸಿದ್ಧಾಂತ ಪ್ರತಿಪಾದಿಸಿದ್ದಾರೆ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿಯು ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದ ನಾಡಗೀತೆ ರಚನೆಕಾರರು ಹೌದು ಹೀಗೆ ರಾಷ್ಟ್ರಕವಿ ಕುವೆಂಪು ರವರು ಯುಗದ ಕವಿಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀ ಹಣಮಂತಪ್ಪ ಪಾಟೀಲ ರವರು ಕುವೆಂಪುರವರು ವೈಚಾರಿಕ ಚಿಂತಕರಾಗಿದ್ದಾರೆ. ಎಲ್ಲಾ ಕಾಲಕ್ಕೂ ಅನ್ವಯಿಸುವ ಸಾಹಿತ್ಯವನ್ನು ರಚಿಸಿದ್ದಾರೆ. ಅವರು ಸಾಹಿತ್ಯದಲ್ಲಿ ನಿಸರ್ಗ, ನಾಡು-ನುಡಿ, ಅಧ್ಯಾತ್ಮ, ಜಾತಿ, ವಿಶೇಧಿತನ ಮೌಡ್ಯ ವಿರೋಧದ ಚಿಂತನೆಗಳನ್ನು ಕಾಣುತ್ತೇವೆ. ಅವರ ಸಾಹಿತ್ಯ ಸೇವೆಗೆ ಪದ್ಮಭೂಷಣ, ಪದ್ಮಭೂಷಣ ಕರ್ನಾಟಕ ರತ್ನ, ಪಂಪ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಮೊದಲಾದ ಗೌರವ ಪ್ರಶಸ್ತಿ ಲಭಿಸಿವೆ ಎಂದು ಹೇಳಿರುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಅಂಬಾದಾಸ ವಹಿಸಿದ್ದರು. ಅತಿಥಿಯಾಗಿ ಗ್ರಾಮದ ಯುವ ಮುಖಂಡ ಮಹೇಶ ತಳಘಟ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಸಂತೋಷ, ಶ್ರೀಮತಿ ವೀಣಾ ಬೊಮಶೆಟ್ಟಿ, ಶ್ರೀಮತಿ ಶೋಭಾ ಭಾಗವಹಿಸಿದ್ದರು. ಸಹ ಶಿಕ್ಷಕರಾದ ಶ್ರೀ ಗುರುಸಿದ್ಧಪ್ಪ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.