ಕನ್ನಡ ಸೇವೆ ಮಾಡಲು ಆಶಿರ್ವದಿಸಿ: ಹೆಬ್ಬಾಳೆ

ಭಾಲ್ಕಿ:ಎ.8: ‘ನಾಡು, ನುಡಿ, ನೆಲ, ಜಲದ ಸಂರಕ್ಷಣೆಯೊಂದಿಗೆ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತೇನೆ. ಗಡಿ ಆಚೆಗೆ ಕನ್ನಡವನ್ನು ತೆಗೆದುಕೊಂಡು ಹೋಗಲು ಸಮಸ್ತ ಕನ್ನಡಿಗರು ನನ್ನನ್ನು ಆಶೀರ್ವದಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ರಾಜಕುಮಾರ ಹೆಬ್ಬಾಳೆ ಮನವಿ ಮಾಡಿದರು.

ಇಲ್ಲಿನ ಚನ್ನಬಸವಾಶ್ರಮದಲ್ಲಿ ಅವರು ಕನ್ನಡಾಭಿಮಾನಿಗಳ ಮತಯಾಚಿಸಿ, ಕಸಾಪ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

‘ಚನಶೆಟ್ಟಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಸಮಸ್ತ ಕನ್ನಡಿಗರಿಗೆ ಮೋಸ ಮಾಡಿದ್ದಾರೆ’ ಎಂದು ದೂರಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ‘ಚನಶೆಟ್ಟಿ ಅವರಿಗೆ ಈ ಹಿಂದೆ ತನು, ಮನ, ಧನದಿಂದ ಸಹಾಯ ಮಾಡಿ ಸಹಕರಿಸಿದ್ದೇವೆ.
ಆದರೆ ಚನಶೆಟ್ಟಿ ವಿಶ್ವಾಸಘಾತುಕರಾಗಿದ್ದಾರೆ. ಕನ್ನಡಾಭಿಮಾನಿಗಳು ಹೆಬ್ಬಾಳೆ ಅವರಿಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು’ ಎಂದು ಹೇಳಿದರು.

ಡಾ.ಕಾಶಿನಾಥ ಚೆಲ್ವಾ ಮಾತನಾಡಿ, ‘ಹುನಸನಾಳೆ ಅವರನ್ನು ನಿಯಮಬಾಹಿರವಾಗಿ ಕಸಾಪ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ’ ಎಂದರು.

ಮುಖಂಡ ಓಂಪ್ರಕಾಶ ರೊಟ್ಟೆ ಮಾತನಾಡಿ, ‘ಚನಶೆಟ್ಟಿ ಅವರು ಸಮ್ಮೇಳನದ ಖರ್ಚು-ವೆಚ್ಚಗಳನ್ನು ಕೇಳಿದ ವ್ಯಕ್ತಿಗೆ ಅಧ್ಯಕ್ಷ ಸ್ಥಾನದಿಂದ ತೆಗೆದಿದ್ದು ನಿರಂಕುಶ ಧೋರಣೆಯಾಗಿದೆ. ಅವರ ಸೋಲು ಖಚಿತವಾಗಿದೆ’ ಎಂದು ಹೇಳಿದರು.

ವಕೀಲ ಉಮಾಕಾಂತ ವಾರದ, ಲಿಂಗಾಯತ ಮುಖಂಡ ಕಿರಣಕುಮಾರ ಖಂಡ್ರೆ, ಮುಖಂಡ ಸೂರಜ್‌ಸಿಂಗ್‌ ರಜಪೂತ್‌, ರೈತ ಮುಖಂಡ ನಾಗಶೆಟ್ಟೆಪ್ಪ ಲಂಜವಾಡೆ, ಬಸವರಾಜ ಮರೆ, ಮಲ್ಲಮ್ಮಾ ನಾಗನಕೇರಿ, ಮಹಾನಂದಾ ದೇಶಮುಖ, ಡಾ.ಮಕ್ತುಂಬಿ, ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ, ನಿವೃತ್ತ ಪ್ರಾಚಾರ್ಯ ಎಸ್.ಬಿ.ಬಿರಾದಾರ, ಶಿವಯ್ಯಾ ಸ್ವಾಮಿ ಮಾತನಾಡಿ, ‘ಸುರೇಶ ಚನಶೆಟ್ಟಿ ಅವರನ್ನು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಹೆಚ್ಚಿನ ಮತಗಳ ಅಂತರದಿಂದ ಸೋಲಿಸಬೇಕಾಗಿದೆ’ ಎಂದು ತಿಳಿಸಿದರು.

ಬೀದರ್‌ನ ಡಾ.ಜಗನ್ನಾಥ ಹೆಬ್ಬಾಳೆ, ಕಸಾಪ ಮಾಜಿ ಅಧ್ಯಕ್ಷ ಶಿವಾನಂದ ಗುಂದಗಿ, ವಸಂತರಾವ್‌ ಹುನಸನಾಳೆ, ಜೈರಾಜ ಕೊಳ್ಳಾ, ಮಲ್ಲಮ್ಮಾ ಪಾಟೀಲ, ಬಂಡೆಪ್ಪ ಶರಣರು, ಅಮೃತ ಮೇತ್ರೆ, ಜಾನಪದ ಪರಿಷತ್ತಿನ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಆಶಾ ರಾಠೋಡ, ಸಾವಿತ್ರಿ ಪಾಟೀಲ, ಗೀತಾ ಪಾಟೀಲ, ಗಂಗಾ ಅಷ್ಟೂರೆ, ಪಾರ್ವತಿ ಧೂಮ್ಮನಸೂರೆ, ಪ್ರಾಚಾರ್ಯ ಜೈಕಾಂತ ಗಂಗೂಜಿ, ನಿರ್ಮಲಾ ತೊಂಡಾರೆ, ವೀರಣ್ಣ ಕುಂಬಾರ, ಕಲ್ಲಪ್ಪಾ ಹೂಗಾರ, ಶ್ರೀಕಾಂತ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಪ್ರೊ.ಅಶೋಕ ಭಂಡಾರಿ, ಮುಖ್ಯಶಿಕ್ಷಕ ಜೈರಾಜ ದಾಬಶೆಟ್ಟಿ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಬೋಚರೆ, ರಾಜಕುಮಾರ ಕಾರಾಮುಂಗೆ, ಚಂದ್ರಕಾಂತ ಮಾನಶೆಟ್ಟೆ, ವೈಜಿನಾಥ ಭಾಲ್ಕೆ, ವಿಠಲರಾವ್‌ ಮೇತ್ರೆ, ಚಂದ್ರಕಾಂತ ಮಾನಶೆಟ್ಟೆ, ಶರಣಪ್ಪ ರುಮ್ಮಾ, ಬಾಲಾಜಿ ಕಾಂಬಳೆ, ಚಂದು ವಂಕೆ, ಭೀಮಣ್ಣ ಕೊಂಕಣೆ, ವೈ.ಆರ್.ಇಂಗಳೆ, ಡಿ.ಎ.ಬಿರಾದಾರ, ಕಾಶಿನಾಥ ಭೂರೆ, ದಿಲೀಪ ರಾಜೋಳೆ, ಅಶೋಕ ಬರ್ಮಾ, ಕುಪೇಂದ್ರ, ವಿಜಯಕುಮಾರ ದೇವಪ್ಪ, ಕೈಲಾಸ ಮಡ್ಡೆ, ಸೂರ್ಯಕಾಂತ ಅಹಮದಾಬಾದೆ ಉಪಸ್ಥಿತರಿದ್ದರು.

ಪ್ರೊ.ಅಶೋಕ ಮೈನಾಳೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಮೇಶ ಬರ್ಮಾ ನಿರೂಪಿಸಿದರು. ದಿಲೀಪ ಘಂಟೆ ವಂದಿಸಿದರು.