ಕನ್ನಡ ಸೇವಾ ವಿಭೂಷಣ ರಾಜ್ಯ ಪ್ರಶಸ್ತಿಗೆ ಬಂಡೆ ಆಯ್ಕೆ

ಇಂಡಿ:ಸೆ.25: ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲೀಷ ಶಿಕ್ಷಕರಾದ ಸಂತೋಷ ಬಂಡೆ ಅವರು ಬೆಳಗಾವಿ ಜಿಲ್ಲೆಯ ಬ್ಯಾಕೂಡದ ಕನಕಶ್ರೀ ಪ್ರಕಾಶನ ವತಿಯಿಂದ ಕೊಡಮಾಡುವ 2021 ನೇ ಸಾಲಿನ “ಕನ್ನಡ ಸೇವಾ ವಿಭೂಷಣ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಾಶನದ ಮುಖ್ಯಸ್ಥರಾದ ಸಿದ್ರಾಮ ನಿಜಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕ ಸಂತೋಷ ಬಂಡೆ ಅವರ ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ಈ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಇದೇ ಸಪ್ಟೆಂಬರ 28 ರಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಕನಕ ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ಮಹಿಳಾ ಯುವ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.