ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಸಿದ್ಧಾರ್ಥ ಮಿತ್ರಾ ಆಯ್ಕೆ

ಹುಮನಾಬಾದ್:ಅ.14: ಸಿದ್ದಾರ್ಥ ಮಿತ್ರಾ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಸ್ಥೆ (ರಿ )ಬೀದರ ಮತ್ತು ಹಣ್ಣು ಪಾಜಿ ಗೆಳೆಯರ ಬಳಗದಿಂದ ಬೀದರ ನಗರದ ಪೂಜ್ಯ ಶ್ರೀ ಡಾ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ನಡೆಯಲಿರುವ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾದ ಗೌರವ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಹಣ್ಣು ಪಾಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಸಿದ್ದಾರ್ಥ್ ಮಿತ್ರಾ ಅವರು ಸೃಜನಶೀಲ,ಸಂವೇದನಾಶೀಲ ಯುವ ಬರಹಗಾರರಾಗಿ , ಕವಿಯಾಗಿ, ವಿಮರ್ಶಕರಾಗಿ ಹಲವು ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.ಬುದ್ದ ಬಸವ ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ರಮಾಬಾಯಿ ಅಂಬೇಡ್ಕರ್, ಕುರಿತು ಹಾಗೂ ತಮ್ಮ ಬರಹದ ಮೂಲಕ ಸಮಾಜವನ್ನು ತಿದ್ದುವ ಮೂಲಕ ವೈಚಾರಿಕ ಪ್ರಜ್ಞೆಯ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ .ಹಲವು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಇವರ ಉತ್ತಮ ಸಾಹಿತ್ಯ ಸಂಘಟನೆ ಸೇವೆ ಪರಿಗಣಿಸಿ ನವೆಂಬರ್ 2ರಂದು ನಡೆಯಲಿರುವ 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗೌರವ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷರು ಹಣ್ಣು ಪಾಜಿ ತಿಳಿಸಿದರು.
ಇವರ ಪ್ರಶಸ್ತಿಗೆ ಖ್ಯಾತ ಸಾಹಿತಿಗಳಾದ ಡಾ ಗವಿಸಿದ್ದಪ್ಪ ಪಾಟೀಲ್, ಕೇಂದ್ರ ಸಾಹಿತ್ಯ ಕನ್ನಡ ಭಾಷಾ ಸಲಹೆಗಾರರು ಡಾ.ಜಯದೇವಿ ಗಾಯಕ್ವಾಡ್,ಪ್ರವೀಣ್ ಮೇಲ್ಕೇರಿ,ಡಾ ಬಸವರಾಜ ದಯಾಸಾಗರ,ಶರದಕುಮಾರ ನಾರಯಣಪೇಟ್ಕರ,ಪಂಚಶೀಲಾ ಕಟ್ಟಿಮನಿ, ರುತ್ವಿಕಾ ಕರ್ನಾಕ್, ಪ್ರಿಯಾಂಕಾ ಕರ್ನಾಕ್,ಪೂಜಾ ಎಮ್, ಪರಮೇಶ್ವರ್ ವಿಲಾಸಪುರ್ ಸಂತೋಷ್ ಭೋಲಾ, ಸೂರ್ಯಕಾಂತ ಪರಶೇಟ್ಟಿ,ಕಾಶಿನಾಥ ಊಡ್ಗಿ, ಜಯವರ್ಧನ ಮರಪಳ್ಳಿ ಇತರರು ಹರ್ಷ ವ್ಯೆಕ್ತಪಡಿಸಿದ್ದಾರೆ.