ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಲೋಕೇಶ್ ಕನಶಟ್ಟಿ ಆಯ್ಕೆ

ಬೀದರ್:ಅ.12: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಹಾಗು ಸಂಸ್ಕøತಿಕ ಸಂಸ್ಥೆ (ರಿ) ಬೀದರ ಹಾಗು ಹಣ್ಮು ಪಾಜಿ ಗೆಳೆಯರ ಬಳಗದಿಂದ ನೀಡಲಾದ ಬೀದರ್ ಜಿಲ್ಲೆಯ ಶ್ರೇಷ್ಠ ಪ್ರಶಸ್ತಿಯಾಗಿರುವ ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಲೋಕೆಶ ಕನಶಟ್ಟಿ ಅವರು ಆಯ್ಕೆಯಾಗಿದ್ದಾರೆ.

ಲೋಕೇಶ್ ಕನಶಟ್ಟಿ ರವರು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದನ್ನು ಗಮನಿಸಿ ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವೆಂಬರ್ 2 ರಂದು ಬೀದರ ನಗರದ ಡಾ ಚನ್ನಬಸವ ಪಟ್ಟದ್ದೆವರ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದೂ ಜಿಲ್ಲಾಧ್ಯಕ್ಷರಾದ ಹಣ್ಮು ಪಾಜಿ ತಿಳಿಸಿದ್ದಾರೆ