ಕನ್ನಡ ಸಾಹಿತ್ಯ ಸಂವರ್ಧನೆಗೆಕಸಾಪ ಶ್ರಮ ಅಪಾರ: ಕೊಟ್ರಪ್ಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.05: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ 110 ವರ್ಷಗಳಿಂದಲೂ ಕನ್ನಡ ಸಾಹಿತ್ಯ ಸಂವರ್ಧನೆಗಾಗಿ ಶ್ರಮಿಸುತ್ತಿದೆಂದು ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಚೋರನೂರು ಟಿ. ಕೊಟ್ರಪ್ಪ ಹೇಳಿದ್ದಾರೆ.
ಅವರು ಇಂದು  ಪರಿಷತ್ತಿನ  ಜಿಲ್ಲಾ ಘಟಕದಿಂದ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪರಿಷತ್ತು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆಂದರು. 
ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಕುರಿತಾಗಿ ಶಿಕ್ಷಕ ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡಿದರು. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ‌ಡಾ. ನಿಷ್ಠಿ ರುದ್ರಪ್ಪ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ಅಧ್ಯಕ್ಷ ಹೆಚ್.‌ ಹಂಪನಗೌಡ, ನ್ಯಾಯವಾದಿ ಆರ್. ವೈ. ಹನುಮಂತರೆಡ್ಡಿ,  ಕವಿಗಳಾದ ಮಾನ್ವಿ ಧನ್ವಂತರಿ, ಕಸಾಪ ಬಳ್ಳಾರಿ ತಾಲ್ಲೂಕು ಅಧ್ಯಕ್ಷ ಕೆ.ವಿ. ನಾಗರೆಡ್ಡಿ, ಗ್ರಾಮೀಣ ಅಧ್ಯಕ್ಷ ಎಂ ಯರ್ರಿಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಶೇಖ್ ರೆಹಮತ್ ಉಲ್ಹಾ ಮತ್ತು ಸಮಾಜ ಸೇವಕರಾದ ಡಿ. ಚಂದ್ರಶೇಖರ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಕಾರ್ಯಕ್ರಮ ನಿರೂಪಿಸಿದರು. ಡಾ. ಬಸವರಾಜ್ ಗದಗಿನ ಸ್ವಾಗತಿಸಿದರು. ಎಂ ಯರ್ರಿಸ್ವಾಮಿ ವಂದನಾರ್ಪಣೆ ಸಲ್ಲಿಸಿದರು.

One attachment • Scanned by Gmail