ಕನ್ನಡ ಸಾಹಿತ್ಯ ಶ್ರೀಮತಂಗೊಳಿಸಿದವರು ಡಾ. ಸಂಕಾಪುರ

ಧಾರವಾಡ,ಜ14 : ಅಪ್ಪಟ ಗ್ರಾಮೀಣ ಸಂಸ್ಕøತಿಯಲ್ಲಿ ಹುಟ್ಟಿ ಬೆಳೆದ ಡಾ. ಎಂ.ಎಸ್. ಸುಂಕಾಪುರ ಅವರು ಕನ್ನಡದ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ಗೋಕಾಕದ ಜಾನಪದ ತಜ್ಞರಾದ ಡಾ. ಸಿ.ಕೆ. ನಾವಲಗಿ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಎಂ.ಎಸ್.ಸುಂಕಾಪುರ ದತ್ತಿ ಅಂಗವಾಗಿ ಆಯೋಜಿಸಿದ್ದ ‘ದತ್ತಿ ಉದ್ಘಾಟನೆ ಹಾಗೂ ಜಾನಪದ ಸಾಹಿತ್ಯಕ್ಕೆ ಡಾ. ಎಂ.ಎಸ್. ಸುಂಕಾಪುರ ಅವರ ಕೊಡಗೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಜಾನಪದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಜಾನಪದ ವಿದ್ವಾಂಸರಲ್ಲಿ ಇವರೂ ಒಬ್ಬರು. ಹಾಸ್ಯ ಹಾಗೂ ವಿಡಂಬಣೆ ಇವರ ಸೃಜನಶೀಲ ಸಾಹಿತ್ಯದ ಜೀವಾಳ. ಡಾ. ಆರ್.ಸಿ. ಹಿರೇಮಠರ ಒಡನಾಡಿಗಳಾದ ಇವರು ಕ.ವಿ.ವಿ.ಯಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಪ್ರೇರಕಶಕ್ತಿಯಾಗಿ ಅದರ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸಿದರು. ಡಾ. ಎಂ.ಎಸ್. ಸುಂಕಾಪುರ ಅವರು ಜಾನಪದ ವಿದ್ಯಾರ್ಥಿಗಳಿಗೆ ಭಾವಪೂರ್ಣವಾಗಿ ರಸಗ್ರಹಣದಿಂದ ಬೋಧಿಸುವ ಕಲೆ ಕರಗತ ಮಾಡಿಕೊಂಡಿದ್ದರು.
ಕ.ವಿ.ವಿ. ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.
ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿ. ಡಾ. ಎಂ.ಎಸ್. ಸುಂಕಾಪುರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಎಂ.ಎಸ್. ನರೇಗಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಸಿ.ಎಂ. ಕುಂದಗೋಳ, ಎಸ್.ಎಸ್. ದೇಸಾಯಿ, ರಾಜೇಂದ್ರ ಸಾವಳಗಿ, ಯಕ್ಕುಂಡಿಮಠ, ಡಾ. ಎಸ್.ವ್ಹಿ. ಅಯ್ಯನಗೌಡರ, ಪ್ರಭಾ ನೀರಲಗಿ ಸೇರಿದಂತೆ ಮುಂತಾದವರಿದ್ದರು.