ಕನ್ನಡ ಸಾಹಿತ್ಯ ಮೈ ಗೂಡಿಸಿಕೊಳ್ಳಿ -ಅಮರ್‌ನಾಥ್ ಕರೆ

ಕೋಲಾರ,ಡಿ.೩೦- ಕನ್ನಡ ನಾಡು ನುಡಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಕುವೆಂಪು ಆ ಕುರಿತು ಗಮನಾರ್ಹ ರಚನೆಗಳನ್ನು ನಾಡಿಗೆ ಸಮರ್ಪಿಸಿದ್ದಾರೆ. ಬಾರಿಸು ಕನ್ನಡ ಡಿಂಡಿಂವ ಎಂದು ಕೆಚ್ಚಿನಿಂದ ಸಾರಿದಂತ ಕವಿ ಕುವೆಂಪು ಎಂದು ಸಂಸ್ಥೆಯ ಕಾರ್ಯದರ್ಶಿ ಸಿ.ಅಮರ್‌ನಾಥ್ ತಿಳಿಸಿದರು.
ಹಂಚಾಳ ಗೇಟ್‌ನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ರಾಷ್ಟ್ರ ಕವಿ ಕುವೆಂಪು ರವರ ೧೧೯ ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಮೌಢ್ಯ, ಅವೈಜ್ಞಾನಿಕ ಚಾರಿತ್ರಿಕತೆಗಳಿಂದ ನಮ್ಮ ಸಮಾಜ ಮುದುಡಿ ಹೋಗಿರುವಾಗಲೂ ಆಶಾವಾದಿಯಾಗಿ ಜೀವನವನ್ನು ಆರಿಸಿದರು. ನಂಬಿದಂತೆ ನಡೆದರು ನಡೆದಂತೆ ಬದುಕಿದರು. ಮನುಷ್ಯ ಹುಟ್ಟುತ್ತಾ ವಿಶ್ವಮಾನವ ಬೆಳೆಯುತ್ತ ಅಲ್ಪ ಮಾನವ ಸಾಗುತ್ತಿದ್ದಾನೆ ಎಂದು ತಿಳಿಸಿದರು.
ಟ್ರಸ್ಟಿ ಸಿ.ಎನ್.ಅರುಣ್ ಪ್ರಸಾದ್ ಮಾತನಾಡುತ್ತಾ, ಹೊಲ ಉಳುವ ಒಬ್ಬರೈತನಿಗೆ ಯೋಗಿಯ ಪಟ್ಟವನ್ನು ಕೊಟ್ಟು ಸಾಹಿತ್ಯಕ್ಷೇತ್ರದಲ್ಲಿ ಸ್ಥಾಪಿಸಿದ ಕುವೆಂಪು ಅವರ ಹೃದಯ ವೈಶಾಲ್ಯವನ್ನು ನಾವು ಭಿನ್ನದೃಷ್ಟಿಯಿಂದ ನೋಡಬೇಕು, ತಮ್ಮ ವಿಶ್ವ ಮಾನವಗೀತೆಯಲ್ಲಿ ಸಾರುತ್ತಾರೆ. ಓ ನನ್ನಚೇತನ ಆಗು ನೀ ಅನಿಕೇತನ ಈ ವಿಶ್ವ ಮಾನವ ಸಂದೇಶವನ್ನು ಅವರು ಜೀವಿತದ ಕೊನೆವರೆಗೂ ಸಾರಿದರು ಎಂದರು.
ಅದೇ ರೀತಿಯಾಗಿ ವಿದ್ಯಾರ್ಥಿಗಳಾದ ನೀವು ಕುವೆಂಪು ರವರ ಜೀವನ ಚರಿತ್ರೆಯನ್ನು ತೆಗೆದು ಕೊಳ್ಳುವದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದರ ಮೂಲಕ ಸಾಹಿತ್ಯ ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿಯಾದ ಕಮಲಮ್ಮ ಕುವೆಂಪು ರವರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕುಮಾರಿ ಆರ್.ಚಂದನ ಕುವೆಂಪು ರವರ ವಿಚಾರಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಮತ್ತು ಶಾಲಾ ಸಿಬ್ಬಂದಿವರ್ಗ, ಶಾಲಾಭಿವೃದ್ದಿs ಸಮಿತಿಯ ಅಧ್ಯಕ್ಷ ಸಿ.ವೆಂಕಟೇಶಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟಪತಿ, ಹಿರಿಯ ಉಪಾಧ್ಯಕ್ಷರುಗಳಾದ ಸಿ.ಜಿ. ಶ್ರೀನಿವಾಸ್, ಮುನಿರೆಡ್ಡಿ ಸಿಬ್ಬಂದಿವರ್ಗ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.