ಕನ್ನಡ ಸಾಹಿತ್ಯ ಪ್ರಪಂಚ ಆಳವಾದದ್ದು

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.22: ಕನ್ನಡ ಸಾಹಿತ್ಯ ಪ್ರಪಂಚ ಆಳವಾದದ್ದು. ಅದು ವಿಭಿನ್ನ ಅಭಿವ್ಯಕ್ತಿಗಳ ಮೂಲಕ ಹಾದು ಕಾಲ ಧರ್ಮಗಳನ್ನೆಲ್ಲ ಮೀರಿ ನಿಲ್ಲುವ ಸಾಮಥ್ರ್ಯ ಹೊಂದಿರುತ್ತದೆ ಎಂದು ಆಕಾಶವಾಣಿ ಪ್ರವಾಚಕಿ ಸವಿತಾ ದೇಶಮುಖ ಹೇಳಿದರು.
ನಗರದ ಹೊರವಲಯದ ಅರಕೇರಿಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷÀತ್ತು ಹಾಗೂ ನಗರ ಕನ್ನಡ ಸಾಹಿತ್ಯ ಪರಿಷÀತ್ತು ಆಶ್ರಯದಲ್ಲಿ ಕೋ.ಚನ್ನಬಸಪ್ಪ ದತ್ತಿ ಅಂಗವಾಗಿ ಕನ್ನಡ ಮಾಧ್ಯಮ ಶಿಕ್ಷಣ ಪಡೆದ ದಲಿತ ಬರಹಗಾರ ಬಹುಮಾನ ಮತ್ತು ಕನ್ನಡ ಸಾಹಿತ್ಯ ಕುರಿತು ಉಪನ್ಯಾಸ ಹಾಗೂ ದ.ಪಿ ಕೋಟ್ನಾಳ, ದಿ.ಕೋಟ್ನಾಳ ಶಿಕ್ಷಕರ ದಂಪತಿಗಳ ಸ್ಮರಣಾರ್ಥವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೋಟ್ನಾಳ ಮನೆತನದ ಕೊಡುಗೆ ಎಂಬ ದತ್ತಿ ಉಪನ್ಯಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಕನ್ನಡ ಅಧ್ಯಾಯನ ಮಾಡುವಾಗ ವೈಮನಸ್ಯ ಯಾಕೆ?, ಕನ್ನಡ ಸುಂದರ, ಸುಮುಧರ ಭಾಷೆ. ಸರಳ ಸುಸಂಸ್ಕøತ ಭಾಷೆಯಾಗಿದೆ. ಆದ್ದರಿಂದ ಕನ್ನಡ ಅಧ್ಯಯನಕ್ಕೆ ಎಲ್ಲರು ಮುಂದಾಗಬೇಕು. ಪ್ರತಿಯೊಬ್ಬರಲ್ಲಿ ಪ್ರತಿಭೆ ಇದೆ. ಅದನ್ನು ಹೊರಕ್ಕೆ ತರಬೇಕು. ಇದ್ದರಿಂದ ಉನ್ನತ ಶಿಖರವನ್ನು ಮುಟ್ಟಲು ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಅಕ್ಷಯ ಕುಲಕರ್ಣಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇದೆ. ಕನ್ನಡ ಭಾಷೆ ಸಹಜ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಮರೆಯಾಗುತ್ತಿರುವುದು ನೋವಿನ ಸಂಗತಿ. ಕನ್ನಡ ಪ್ರಾಚೀನ ಭಾಷೆ ಕನ್ನಡ ಅಧ್ಯಯನ ಮಾಡಿದರೂ ಅತೀ ಹೆಚ್ಚು ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆ ಭಾವನಾತ್ಮಕ ಕನ್ನಡ ಜನರಮನದಲ್ಲಿ ಇದೆ. ಆದರೆ ಇಂದು ಕನ್ನಡ ಅಧ್ಯಯನ ಮಾಡಿದರೆ ನಾವು ಯಾವುದೇ ಸಾಧನೆ ಮಾಡುವುದಿಲ್ಲ ಎಂಬ ಮನೋಭಾವದ ಮೂಡಿದೆ. ಯಾಕೆಂದರೆ ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚಾಗಿದೆ. ಇದ್ದರಿಂದ ಕನ್ನಡ ಶಾಲೆಗಳು ಮುಚ್ಚು ಪರಿಸ್ಥಿಗೆ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ಜಿ.ಡಿ ಕೋಟ್ನಾಳ ಮಾತನಾಡಿ, ಕೋಟ್ನಾಳ ಮನೆತನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋಟ್ನಾಳ ಮನೆಯಿಂದ 37 ಜನರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಯಾಕೇಂದರೆ ಗುರುವಿನ ಸ್ಥಾನ ತುಂಬಾ ಮಹತ್ವಯಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಗುರುವಿನಲ್ಲಿ ಮಹತ್ವ ಗುಣ ಲಕ್ಷಣಗಳು ಕಂಡುಬರುತ್ತಿಲ್ಲ. ಗುರು ಶಿಷÀ??ರ ಸಂಬಂಧ ದೂರಿವಾಗಿದೆ. ಒಂದು ದೇಶ ಅಭಿವೃದ್ಧಿ ಯಾಗುತ್ತಿದ್ದರೆ ಅಲ್ಲಿ ಶಿಕ್ಷಕರ ಶ್ರಮ ಹೆಚ್ಚಿದೆ. ಯಾವುದೇ ಕ್ಷೇತ್ರ ಬೆಳೆವಳಿಗೆ ಆಗಿದೆ. ಇಂದು ಶಿಕ್ಷಕರಿಂತ ವಿದ್ಯಾರ್ಥಿಗಳು ಮುಂದಾಗಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಪರಿಪೂರ್ಣ ಇಲ್ಲಾಂದರೆ ನಾವು ಮಾಡುವ ಸಾಧನೆ ಅಪೂರ್ಣಾಗುತ್ತದೆ. ಯಾವುದೇ ಸಾಧನೆಗೆ ಅಧ್ಯಯನ ಮಾಡದರೆ ತಳಪಾಯ ಹಾಕುತ್ತದೆ ಎಂದರು.
ಪ್ರಸ್ತುತ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷÀತ್ತಿ ವತಿಯಿಂದ ಮಕ್ಕಳ ಸಮ್ಮೇಳನ ಮಾಡಲು ಹಿರಿಯ ಸಾಹಿತಿಗಳ ಸಲಹೆ ಮೆರೆಗೆ ನಿರ್ಧಾರ ಮಾಡಲಾಗಿದೆ. ಇದ್ದರಿಂದ ಮಕ್ಕಳಿರುವ ಪ್ರತಿಭೆ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷತೆ ಪ್ರಾಚಾರ್ಯೆ ರೇಖಾ ಬಾರ್ಕಿ ಅವರು, ಪಾಲಕರು ಮಕ್ಕಳಿ ಈ ಜನ್ಮಭೂಮಿ ಸಂಸ್ಕಾರ ನೀಡಬೇಕು. ಕನ್ನಡ ಭಾಷೆ ಮಾತೃಭಾಷೆಯನ್ನು ನಾವು ಮಕ್ಕಳಿಂದ ದೂರ ಮಾಡುತ್ತಿದ್ದಾರೆ. ಮಾತೃಭಾಷೆ ಮರೆತರೆ ಸಂಸ್ಕೃತಿದೂರ ಆಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೋ.ಚನ್ನಬಸಪ್ಪ ಅವರ ದತ್ತಿ ಪ್ರಶಸ್ತಿಯನ್ನು ಶೋಭಾ ಸೀತಾರಾಮ ಹರಿಜನ ಅವರಿಗೆ ನೀಡಿ ಗೌರವಿಸಲಾಯಿತು.
ಕೆಪಿಸಿಸಿ ಸದಸ್ಯ ಪೀರಪಟೇಲ, ಉದ್ಯಮಿ ಶಿವಾನಂದ ಇಂಚಗೇರಿ, ನಿವೃತ್ತಿ ರಜಿಯಾಬೇಂಗ ಕೊಟ್ನಾಳ, ರಾಜೇಸಾಬ ಶಿವನಗುತ್ತಿ, ಆನಂದ ಮೋಕಾಶಿ, ಖಾಜಾಮೈನುದ್ದೀನ್ ಪಟೇಲ್, ಭೀಮನಗೌಡ ಚಡಚಣ, ರೂಪಾವತಿ ಪಾರಗೊಂಡ, ಕೇಮು ರಾಠೋಡ, ರುಭಿನಾ ಮುಲ್ಲಾ, ಶಬ್ಬಿರಹಮ್ಮದ ಚೌಧರಿ, ಅಶ್ವಿನಿ ಕುಲಕರ್ಣಿ, ಜ್ಯೋತಿ ಸಜ್ಜನ, ಮಾಳಮ್ಮಾ ಹುಲ್ಲಿಹಾಳ, ವಿಜಯಲಕ್ಷ್ಮಿ, ಆಪ್ರೀನ್ ಮುಲ್ಲಾ ಮುಂತಾದವರು ಇದ್ದರು.