ಕನ್ನಡ ಸಾಹಿತ್ಯ ಪರಿಷತ್ ‌ಚುನಾವಣೆ ಮುಂದೂಡಿಕೆ

ಬೆಂಗಳೂರು, ಏ.26- ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷ ಸ್ಥಾನಕ್ಕೆ ಮೇ.9 ರಂದು ನಡೆಸಲು ಉದ್ದೇಶಿಸಿದ್ದ ಚುನಾವಣೆಯನ್ನು ಸರ್ಕಾರ ಮುಂದೂಡಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿ್ಬನ್ನೆಲೆಯಲ್ಲಿ ಪರಿಷತ್ ಚುನಾವಣೆಯನ್ನು ಮುಂದೂಡಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.

ಪರಿಷತ್ತು ಚುನಾವಣೆ ಮತದಾನದ ಅಂತಿಮ‌ ಪ್ರಕ್ರಿಯೆ ಸಾಗಿದೆ. ಆದರೆ ಕೊರೋನಾ ಹೆಚ್ಚಳ‌ ಹಿ್ನನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಚುನಾವಣೆ ನಡೆಸುವುದು ಕಷ್ಟ ಸಾದ್ಯ.ಹೀಗಾಗಿ ಪ್ರಕ್ರಿಯೆ ಎಲ್ಲಿಗೆ ನಿಂತಿದೆಯೋ ಮುಂದೆ ಅಲ್ಲಿಂದಲೇ ಚುನಾವಣೆ ನಡೆಯಲಿದೆ ಅಲ್ಲಿ ತನಕ ಮುಂದೂಲಾಗಿದೆ ಎಂದು ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ವೆಂಕಟಸ್ವಾಮಿ ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದೆ. ಜೊತೆಗೆ ವಾರಾಂತ್ಯ ಕರ್ಪ್ಯೂ ಇರುವುದರಿಂದ ಚುನಾವಣಾ ಮುಂದೂಡಿಕೆ ಅನಿವಾರ್ಯ ವಾಗಿದೆ ಎಂದು ತಿಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಎಲ್ಲಿಂದ ನಿಂತಿದೆಯೋ ಅಲ್ಲಿಂದ ಮುಂದುವರಿಯಲಿದೆ ಎಂದೂ ಕೂಡ ಆದೇಶದಲ್ಲಿ ತಿಳಿಸಿದ್ದಾರೆ‌,