ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಳಕೂರ ವಲಯ ಘಟಕ ಉದ್ಘಾಟನೆ

ಜೇವರ್ಗಿ:ಸೆ.1 : ಕನ್ನಡ ಸಾಹಿತ್ಯದಿಂದ ಜ್ಞಾನ ಹೆಚ್ಚಾಗುತ್ತದೆ. ನಮ್ಮ ನಡತೆ ಮತ್ತು ಜೀವನದ ಶೈಲಿ ಬದಲಾಗುತ್ತದೆ. ನಮ್ಮ ಹಿರಿಯರು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಿದ್ದಾರೆ. ನಾವು ಕೂಡ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳಸಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ ಅಭಿಮತಪಟ್ಟರು.

ತಾಲ್ಲೂಕಿನ ಕೋಳಕೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಳಕೂರ ವಲಯ ಘಟಕ ಉದ್ಘಾಟನೆ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಉದ್ಟಾಟಿಸಿ ಮಾತನಾಡಿದ ಅವರು ನಮ್ಮ ಯುವ ಪಿಳಿಗೆ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಕನ್ನಡ ಸಾಹಿತ್ಯ ಬಹಳ ಶ್ರೇಷ್ಟವಾದದ್ದು. ನಮ್ಮ ಹಿರಿಯರು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಿದ್ದಾರೆ. ಇಂದಿನ ಯುವಕರು ಕೂಡ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳಸಬೇಕು. ಕನ್ನಡ ಸಾಹಿತ್ಯದಿಂದ ನಮ್ಮ ನಮ್ಮ ಆಚಾರ ವಿಚಾರಗಳು ಉತ್ತಮವಾಗುತ್ತವೆ, ನಮ್ಮ ಜ್ಞಾನ ಬೆಳೆಯುತ್ತದೆ, ಸಮಾಜದಲ್ಲಿ ಉತ್ತಮ ಸಂಸ್ಕರಾ ನಮ್ಮದಾಗುತ್ದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ವಲಯ ಘಟಕ ಕೋಳಕೂರ ವ್ಯಾಪ್ತಿಯ ಸಾಧಕರಿಗೆ ಹಾಗೂ ಕೋಳಕೂರ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮರೆಪ್ಪ ಮುತ್ಯಾ, ತಾಲೂಕ ದಂಡಾಧೀಕಾರಿ ರಾಜೇಶ್ವರಿ ಪಿ. ಎಸ್., ಕಾ.ನಿ. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಚನ್ನಮಲ್ಲಯ್ಯ ಹಿರೇಮಠ, ರಾಜಶೇಖರ್ ಸೀರಿ, ವಿಜಯ್ ಕುಮಾರ್ ಹಿರೇಮಠ್, ಗ್ರಾಮ ಪಂಚಾಯತಿ ಅಧ್ಯಕ್ಷ ನೀಲಮ್ಮ ಬಸವರಾಜ ಕಟ್ಟಿ, ನೀಲಕಂಠರಾವ ಮೂಲಗಿ, ಕಲ್ಯಾಣಕುಮಾರ ಸಂಗಾವಿ, ಶಾಂತಲಿಂಗ ಪಾಟೀಲ್ ಕೋಳಕೂರ ನೀಲಕಂಠರಾಯಗೌಡ ಮಾಲಿಪಾಟೀಲ್, ಗುರುಶಾಂತಪ್ಪ ಬಿ., ಬಸವರಾಜ ಕಟ್ಟಿ, ಸಿದ್ರಾಮ ಕಟ್ಟಿ, ಎಸ್. ಕೆ. ಬಿರಾದಾರ, ಸೇರಿದಂತೆ ಅನೇಕರು ಇದ್ದರು.