ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ-ಸಂಗಮೇಶ

ರಾಯಚೂರು, ಮಾ.೧೪- ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ನನಗೆ ಬೆಂಬಲಿಸಿ, ನಾನು ಅಧ್ಯಕ್ಷನಾದರೆ ರಾಯಚೂರು ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಗಡಿ ಭಾಗದ ಸ್ಥಿತಿಗತಿಗಳನ್ನು ಸುಧಾರಿಸಲು ಕನ್ನಡ ಭಾಷೆಯ ಅಭಿವೃದ್ಧಿ ಶ್ರಮಿಸುತ್ತೇನೆ ಎಂದು ಕನ್ನಡ ಪರಿಚಾರಿಕ ಕನ್ನಡ ಸಾಹಿತ್ಯ ಪರಿಷತ್ ಸೇವಾ ಅಕಾಂಕ್ಷಿ ಸಂಗಮೇಶ ಬಾದವಾಡಗಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಪ್ಪಳ ಜಿಲ್ಲೆಯನವನಾದ ನಾನು ಈ ಭಾಗದ ಸಾಹಿತ್ಯ ಕಾಳಜಿಉಳ್ಳವನಾಗಿದ್ದೇನೆ. ಹೈದ್ರಾಬಾದ್ ಕರ್ನಾಟಕದ ೩೭೧ ಜೆ ತಿದ್ದುಪಡಿ ಯಾದಾಗ ಅದರ ಸದುಪಯೋಗ, ಫಲಪ್ರದಗಳನ್ನು ಪುಸ್ತಕ ಮೂಲಕ ತಿಳಿಸಲು ೧೦ ಸಾವಿರ ಪುಸ್ತಕಗಳನ್ನು ಸ್ವಂತ ಖರ್ಚಿನಲ್ಲಿ ರಚಿಸಿ ಶಾಲಾಕಾಲೇಜು, ಗ್ರಂಥಾಲಯ ಗಳಲ್ಲಿ ಹಂಚಿಕೆಮಾಡಿದ್ದೇನೆ. ಹೈ.ಕಭಾಗದ ಪ್ರಾದೇಶಿಕ ನ್ಯಾಯ ಸಿಗುವ ದೃಷ್ಟಿಯಿಂದ ೨೦೦೯ ರಿಂದ ೨೦೧೪ ರವರೆಗೆ ಇಬ್ಬರ ಅಧ್ಯಕ್ಷರ ಅವಧಿಯಲ್ಲಿ ಕಸಾಪದ ಗೌರವ ಕಾರ್ಯದರ್ಶಿಯಾಗಿ ೫ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಗಳನ್ನು ಸಂಘಟಿಸಿದ್ದೇನೆ. ಸರ್ವ ಸದಸ್ಯರ ಸಭೆ,ವಿಚಾರ ಸಂಕಿರಣ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಸಿರವಾರದಲ್ಲಿ ಕಾವ್ಯ ಕಮ್ಮಟ, ಅನೇಕ ಗೋಷ್ಠಿ ಜಿಲ್ಲಾ ತಾಲ್ಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಕ್ರಿಯಾಶೀಲನಾಗಿಕೆಲಸಮಾಡಿದ್ದೇನೆಎಂದರು.
ಕಳೆದ ಬಾರಿ ಕಸಾಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದರೂ ಈ ಬಾರಿ ಚುನಾವಣೆಯಯಶಸ್ವಿಗೆ ಹೊಸಪ್ರಯೋಗಕೈಗೊಂಡಿದ್ದೇನೆ. ಅನುಪದಮೇಲೆಜಯಗಳಿಸಬಹುದು. ಕನ್ನಡ ಅನ್ನದ ಭಾಷೆಯಲ್ಲ ಎಂಬಭಾವನೆ ಅಳಿಸಿಹಾಕಲು ವಿಜ್ಞಾನ ತಂತ್ರಜ್ಞಾನ ದ ಅವಿಷ್ಕಾರದಿಂದ ಉದ್ಯೋಗಾಧಾರಿತ ಭಾಷೆಯಾಗಿ ಪರಿವರ್ತನೆಗೆ ಪ್ರಯತ್ನಿಸಿ, ಸರ್ಕಾರಿಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಪರಿಷತ್ತು ಹಳ್ಳಿಗಳ ಸ್ವತ್ತು ಕಾರ್ಯಕ್ರಮದಡಿ ಗ್ರಾಮೀಣ ಮಟ್ಟಕ್ಕೂ ಸಾಹಿತ್ಯ ಸಾಂಸ್ಕೃತಿಕ ಕ್ರಿಯಾ ಚಟುವಟಿಕೆಗಳನ್ನು ವಿಸ್ತರಿಸಿ ತಾಲ್ಲೂಕು, ಹೋಬಳಿ ಮಟ್ಟದಲ್ಲಿಕನ್ನಡ ಭವನನಿರ್ಮಿಸಲಾಗುವುದು.
ಪರಿಷತ್ತಿನ ಕೇಂದ್ರೀಕೃತ ಆಡಳಿತ ಹಾಗೂಸಾಹಿತ್ಯಕಚಟುವಟಿಕೆಗಳಸಂಘಟನೆಯನ್ನು ವಿಭಾಗೀಯ ಮಟ್ಟಕ್ಕೆ ವಿಸ್ತರಿಸಿ ವಿಕೇಂದ್ರೀಕರಣ ಮಾಡಿ ಪ್ರಾದೇಶಿಕ, ಪ್ರತಿಭಾನ್ಯಾಯ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸಹಕಾರ ನೀಡಲಾಗುವುದು. ಗಡಿಭಾಗದಲ್ಲಿ ಕನ್ನಡಮಯ ವಾತಾವರಣ ನಿರ್ಮಿಸಲು ಗಡಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಚಿದಾನಂದ ಸಾಲಿ, ಕೆಆರ್. ಕಂದಗಲ್, ವಿಆರ್ ಪೂಜಾರಿ, ರಂಗನಗೌಡ ಸೇರಿದಂತೆ ಇತರರರು ಇದ್ದರು.