ಕನ್ನಡ ಸಾಹಿತ್ಯ ಪರಿಷತ್ ಪಾರದರ್ಶಕವಾಗಲಿ

ಸಂಜೆವಾಣಿ ವಾರ್ತೆ
ಹೊಸಪೇಟೆ, ನ.06: ಕನ್ನಡ ಸಾಹಿತ್ಯ ಪರಿಷತ್ ಭ್ರಷ್ಟಾಚಾರ ಮುಕ್ತವಾಗಿ ಮಾಡುವ ಹಾಗೂ ಕನ್ನಡದ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಹೋರಾಡುವ ಸಂಕಲ್ಪದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ರಾಜಶೇಖರ ಮುಲಾಲಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನ ಕಂಡ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಅನೇಕರು ಶ್ರಮಿಸಿದ್ದಾರೆ ಮತ್ತೆ ಅನೇಕರು ದುರುಪಯೋಗವನ್ನು ಮಾಡಿದ್ದಾರೆ ಅದನ್ನು ಸರಿ ಪಡಿಸುವ ಮೂಲಕ ರಾಜಕೀಯ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ತಡೆಗಟ್ಟಲು ಮುಂದಾಗುವುದಾಗಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತ ಚುನಾವಣೆಯಲ್ಲಿ ಆರ್ ಎಸ್ ಎಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದರು ಅದು ತಪ್ಪು ಇದಕ್ಕೆ ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಶಿವಪ್ರಕಾಶ್, ಮದುರಚನ್ನಶಾಸ್ತ್ರಿ, ಕಿಚಡಿಕೊಟ್ರೇಶ್, ಅಕ್ಕಿ ಬಸವರಾಜ, ಶರಣಸ್ವಾಮಿ, ಪಲ್ಲದ್ ದೊಡ್ಡಪ್ಪ, ಸೋಮನಾಥ ಕುಡತಿನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.