ಕನ್ನಡ ಸಾಹಿತ್ಯ ಪರಿಷತ್ತ ಸಾಧಕರೊಂದಿಗೆ ಸಂವಾದ

ಹುಮನಾಬಾದ :ಫೆ.25: ಕಸಾಪ ವತಿಯಿಂದ ಆಯೋಜಿಸಿದ ಸಾಧಕರೊಂದಿಗೆ ಸಂವಾದ 10 ನೇ ತಿಂಗಳ ಕಾರ್ಯಕ್ರಮ ಚೀನಕೇರಾ ಗ್ರಾಮದ ಸಾಧಕರಾದ ಶಿವಸ್ವಾಮಿ ಚೀನಕೇರಿ ಅವರೋಂದಿಗೆ ಗ್ರಾಮದ ಸಾಧಕರ ಮನೆಯಲ್ಲಿ ಆಯೋಜಿಸಲಾಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಪಾಂಡುರಂಗ ಪಿರಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸೇಡೋಳ ಮಾತನಾಡುತ್ತ,

ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಮಾಜ ಮುಖಿ ಕಾರ್ಯಕ್ರಮದ ಮುಖಾಂತರ ನಮ್ಮ ಹಳ್ಳಿಗಳಲ್ಲಿ ಸಾಧಕರನ್ನು ಹುಡುಕಿ ಅವರ ಜೋತೆ ಸಂವಾದ ಕಾರ್ಯಕ್ರಮ ನಡೆಸುತ್ತಿರುವದು ತುಂಬ ಸಂತೋಷದ ವಿಷಯ ಎಂದು ನುಡಿದರು , ಕಾರ್ಯಕ್ರಮದ ಆಶಯನುಡಿಯನ್ನು ಎನ್.ಪಿ.ಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾದ ಶಿವಕುಮಾರ ಕಂಪ್ಲಿ ಮಾತನಾಡಿ

ಪರಿಷತ್ತು ಇಡಿ ಒಂದು ವರ್ಷದಿಂದ ಅನೇಕ ಕಾರ್ಯಕ್ರಮ ಜನ ಪರ ಕನ್ನಡ ಕಟ್ಟುವ, ಕನ್ನಡ ಬೆಳೆಸುವ ಕಾರ್ಯ ನಿರಂತರ ಮಾಡಿಕೊಂಡು ಬರುತ್ತಿದೆ, ಮುಂದೆಯು ಸಹ ಕನ್ನಡ ಕಟ್ಟುವಲ್ಲಿ ಎಲ್ಲರು ಶ್ರಮಿಸೂಣ ಎಂದು ನುಡಿದರು,

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಾವಿತ್ರಿಬಾಯಿಪೂಲೆ ಸಂಘದ ಜಿಲ್ಲಾ ಅಧ್ಯಕ್ಷರಾದ ಸಾರಿಕಾ ಗಂಗಾ ವಹಿಸಿಕೂಂಡಿದರು, ಸಾಧಕರಾದ ಶಿವಸ್ವಾಮಿ ಚೀನಕೇರಾ ಅವರೂಂದಿಗೆ ಸಂವಾದಕರಾದ ಸೇಡೋಳ ವಲಯ ಘಟಕ ಕಸಾಪ ಅಧ್ಯಕ್ಷರಾದ ಭಜರಂಗ ಹುಪ್ಪಳೆ ಅವರು ಸಂವಾದ ಕಾರ್ಯಕ್ರಮ ನೇರವೆರಿಸಿ ಕೂಟ್ಟರು, ಸಾಧಕರಾದ ಶಿವಸ್ವಾಮಿ ಚೀನಕೇರಾ ತಮ್ಮ ಮನದಾಳದ ಮತುಗಳಿಂದ ತಮ್ಮ ಸಾಧನೆಯನ್ನು ಹಂಚಿಕೊಳ್ಳುತ್ತ ಇಡಿ ನನ್ನ ಜೀವನ ಶರಣ ತತ್ವ ಸಂಗಿತ,ಸಾಹಿತ್ಯ ,ಆಚಾರ ವಿಚಾರಗಳಿಗೆ ಅಣಿ ಯಾಗಿರುವೆ ಎಂದು ಹೇಳುತ್ತ , ಸುಮಾರು 10 ಪುಸ್ತಕಗಳು ಬರೆದಿರುವೆ, ಸ್ವಯಂ ವಚನಗಳು ರಚಿಸಿರುವೆ, ಅದರಲ್ಲು 4 ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ನನ್ನ ಬಹು ದೂಡ್ಡ ಸಾಧನೆ ಎಂದು ಹೇಳುತ್ತ , ನಾನು ಬರೆದಿರುವ ಅನೇಕ ಪುಸ್ತಕಗಳು ಪ್ರಕಟಿಸಿರುವೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ಧಲಿಂಗ ವಿ ನಿರ್ಣಾ ಮಾತನಾಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಅಪರುಪದ ಸಾಧಕರನ್ನು ಹುಡುಕಿ ಅವರ ಜೊತೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ ಅದರಲ್ಲಿ ಶಿವಸ್ವಾಮಿ ಸರ್ ಸಾಧನೆ ಒಂದು ಮಾದರಿ ಸಾಧಕರು ಅವರ ಜೋತೆ ಪರಿಷತ್ತು ಸಂವಾದ ಕಾರ್ಯಕ್ರಮ

ಎಂದು ನುಡಿದರು, ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿಗಳಾದ ಡಾ.ಭುವನೇಶ್ವರಿ , ರವಿಂದ್ರ ಹುಲಗುತ್ತಿ , ಮಡೆಪ್ಪಾ ಕುಂಬಾರ, ಜೈವಂತ ಉಪಾರ, ರಮೇಶ್ ರೆಡ್ಡಿ, ಆರ ಎಮ್ಮ ಭಂಕಲಗಿ, ಇತರರಿದ್ದರು, ಕಾರ್ಯಕ್ರಮವನ್ನು ಕಸಾಪ ಸಂಘನಾ ಕಾರ್ಯದರ್ಶಿಗಳಾದ ವೀರಣ್ಣ ಪಂಚಾಳ ನಿರ್ವಹಿಸಿದರು, ಲಿಂಗಾರತಿ ಶಿವಸ್ವಾಮಿ ಸ್ವಾಗತಿಸಿದರು, ಬಾಬು ಪಾಟೀಲ ವಂದಿಸಿದರು ಅನೇಕ ಕನ್ನಡ ಆಸಕ್ತರು ಚೀನಕೇರಾ ಗ್ರಾಮಸ್ತರು ಭಾಗವಹಿಸಿದರು..