ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಷ್ಟ್ರಕವಿ ಕುವೆಂಪು ಜಯಂತೋತ್ಸವ ಆಚರಣೆ

ಹುಮನಾಬಾದ : ಡಿ.30:ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣ ಕನ್ನಡದ ಮೊದಲ ಜ್ಞಾನಪೀಠ ಪುರಸ್ಕøತ ರಾಷ್ಟ್ರಕವಿ ಕುವೆಂಪುರವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಪಂಡರಿನಾಥ ಹುಗ್ಗಿ ಮಾತನಾಡಿ ಕನ್ನಡದ ಮೊದಲ ಕವಿ, ರಾಷ್ಟ್ರಕವಿ, ಕನ್ನಡ ಭಾಷೆಗೆ ಮೊದಲನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅವರ ದಿನಾಚರಣೆ ಆಚರುಸುವ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದ ದಿನವನ್ನಾಗಿ ಆಚರಿಸುತ್ತಾ ನಾಡಿಗೆ ಸಾಹಿತ್ಯದ ಪರಿಕಲ್ಪನೆಯನ್ನು ಮೂಡಿಸುತ್ತಾ ನಾಡಗೀತೆಯನ್ನು ರಚಿಸಿದ ಕುವೆಂಪು ಅವರ ಸಂದೇಶ ಯುವಕರಿಗೆ ಬಹಳ ಪ್ರಾಮುಖ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ರವೀಂದ್ರರೆಡ್ಡಿ ಮಾಲಿ ಪಾಟೀಲ್ ಮಾತನಾಡಿ ಕಸಾಪ ಸಾಹಿತಿಗಳ ಜನ್ಮದಿನ ಆಚರಣೆ ಹಾಗೂ ಅವರ ಮಾರ್ಗದರ್ಶನ ನಾಡಿನ ಯುವ ಸಾಹಿತಿಗಳಿಗೆ ಸಾರುವ ಅನೇಕ ಕಾರ್ಯಕ್ರಮಗಳು ನಿರಂತರ ಮಾಡಿಕೊಂಡು ಬರುತ್ತಿದೆ ಎಂದು ನುಡಿದರು,

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗ ವಿ ನಿರ್ಣಾ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತಿಗಳ ಬರಹಗಾರರ, ಚಿಂತಕರ, ವೇದಿಕೆಯಾಗಿದೆ ನಮ್ಮ ನಾಡನುಡಿಗೆ ಅನೇಕ ಮಹನೀಯರು ಹಾಗೂ ಹೋರಾಟಗಾರರು ಕನ್ನಡ ಕಟ್ಟುವಲ್ಲಿ ಕನ್ನಡ ಬೆಳೆಸುವಲ್ಲಿ ಕನ್ನಡ ಉಳಿಸುವಲ್ಲಿ ತಮ್ಮದೇ ಆದ ಕಾರ್ಯ ಮಾಡಿಕೋಂಡು ಬರುತ್ತಿದೆ, ಸಾಹಿತ್ಯ ಪರಿಷತ್ತು ರಾಷ್ಟ್ರಕವಿಗಳಾದ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರುವ ಪ್ರಯುಕ್ತ ಈ ಒಂದು ಕಾರ್ಯಕ್ರಮ ಆಯೋಜಿಸಿದೆ ಹೀಗೆ ತಾಲೂಕಿನಾದ್ಯಂತ ಅನೇಕ ಕಾರ್ಯಕ್ರಮಗಳು ಸಾಹಿತ್ಯ ಪರಿಷತ್ತಿನಿಂದ ಜರುಗುತ್ತಿವೆ ಬರುವ 30ನೇ ದಿನಾಂಕದಂದು ಬೀದರ್ ಜಿಲ್ಲೆಯಲ್ಲಿ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಶ್ಲಾಘನೀಯ ಈ ಒಂದು ಸಾಹಿತ್ಯ ಸಮ್ಮೇಳನಕ್ಕೆ ಅಪಾರ ಸಂಖ್ಯೆಯಲ್ಲಿ ಸಾಹಿತ್ಯ ಆಸಕ್ತರು ಶಿಕ್ಷಕರು ಹಾಗೂ ಕನ್ನಡಿಗರು ಭಾಗವಹಿಸುವಂತೆ ವಿನಂತಿ ಮಾಡಿಕೊಂಡರು,

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಮುರುಗೇಂದ್ರ ಸಜ್ಜನ ಶೆಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶೇಕ್ ಮಹೆಬುಬ ಪಟೇಲ್ ಕಸಪಾ ಸಂಘಟನಾ ಕಾರ್ಯದರ್ಶಿಗಳಾದ ಶಿವರಾಜ್ ಮೈತ್ರೆ ಹಿರಿಯರಾದ ಭಕ್ತರಾಜ ಚಿತಾಪುರೆ ,ವಿಜಯ್ ಕುಮಾರ್ ಚಟ್ಟಿ , ಅಮೀತ ಚಿಂಚೋಳಿಕರ್, ಸುಭಾಷ ಪಾಟೀಲ್, ಮಾರುತಿ ಪೂಜಾರಿ,ಶ್ರೀಧರ ಚೌಹಾಣ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಕಾಂತ್ ಸೂಗಿ ನಿರೂಪಿಸಿದರು. ವಲಯ ಕಸಪಾ ಅಧ್ಯಕ್ಷರಾದ ಭಜರಂಗ ಉಪಳೆ ಸ್ವಾಗತಿಸಿದರು. ಸಂತೋಷ ನಾನಕೇರೆ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.