ಕನ್ನಡ ಸಾಹಿತ್ಯ ಪರಿಷತ್ತು: ಲಕ್ಷ್ಮೀ ಮೇತ್ರೆ ಸನ್ಮಾನ

(ಸಂಜೆವಾಣಿ ವಾರ್ತೆ)
ಹುಮನಾಬಾದ:ನ.19:ಹುಮನಾಬಾದ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಹುಮನಾಬಾದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಭಾರತ ಸರ್ಕಾರದಿಂದ ರಾಷ್ಟ್ರಪತಿ ಪ್ರಶಸ್ತಿ ಸ್ವೀಕರಿಸಿದ ಶ್ರೀಮತಿ ಲಕ್ಷ್ಮೀ ಮೇತ್ರೆ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು ಸಭೆಯನ್ನು ಉದ್ದೇಶಿಸಿ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಾದಗಳಾದ ಡಾ.ಶಿವಕುಮಾರ್ ಸಿದ್ದೇಶ್ವರ್ ಮಾತನಾಡುತ್ತ ನಮ್ಮ ಆರೋಗ್ಯ ಇಲಾಖೆಗೆ ಹೆಮ್ಮೆಯ ವಿಷಯ ಏಕೆಂದರೆ ಅತ್ಯಂತ ಸರಳ ಸಜ್ಜನಿಕರಾದಂತ ಶ್ರೀಮತಿ ಲಕ್ಷ್ಮಿಯವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿರುವುದರಿಂದ ಈ ಒಂದು ಗೌರವಕ್ಕೆ ಭಾಜನರಾಗಿದ್ದು ನಮಗೆ ಹಾಗೂ ಇಲಾಖೆಗೆ ಗೌರವ ತಂದಿರುವದರಿಂದ ಅವರನ್ನು ಅಭಿನಂದಿಸುಲಾಗಿದೆ ಎಂದು ನುಡಿದರು, ಅದೇ ರೀತಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ರವೀಂದ್ರ ರೆಡ್ಡಿ ಮಾಲಿಪಾಟೀಲ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ತುಂಬಾ ಕಾರ್ಯನಿರ್ವಹಿಸಿದ್ದು ಅವರ ಒಂದು ಶ್ರಮಕ್ಕೆ ಇಂದು ನಾವೆಲ್ಲರೂ ಆರೋಗ್ಯದಿಂದ ಸಮೃದ್ಧಿಯಾಗಿ ಇರಲು ಸಾಧ್ಯ ಎಂದು ನುಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ.ನಾಗನಾಥ ಹುಲಸೂರೆ ಮಾತನಾಡುತ್ತಾ ಈ ಒಂದು ಗೌರವಕ್ಕೆ ಭಾಜಕರಾದ ಇವರ ನಿಸ್ವಾರ್ಥ ಸೇವೆ ನಿರಂತರ ಸೇವೆ ಹಾಗೂ ಅಧಿಕಾರಿಗಳೆಲ್ಲರ ಸಹಕಾರ ಸಹಾಯ ಇರುವುದರಿಂದ ನಿರಂತರ ಸೇವೆ ಮಾಡಿ ಇಂದು ರಾಷ್ಟ್ರಪತಿಗಳಿಂದ ಗೌರವಕ್ಕೆ ಭಾಜನರಾಗಿದ್ದು ನಮಗೆ ಹೆಮ್ಮೆಯ ವಿಷಯ ಹೀಗಾಗಿ ನಮ್ಮ ತಾಲೂಕಿನ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದವಲ್ಲಿ ಇವರ ಪಾತ್ರ ತುಂಬಾ ಯಂದು ಹೆಳುತ್ತಾ ಇವರಿಗೆ ಅಭಿನಂದನೆಗಳು ಹಾಗೂ ಇವರು ಮುಂದೆ ಹೇಗೆ ನಿರಂತರವಾಗಿ ಸೇವೆ ಮಾಡಲೆಂದು ಹಾರೈಸಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀಧರ್ ಪಾಟೀಲ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗ ನಿರ್ಣಾ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕ ಅಧ್ಯಕ್ಷರಾದ ಮುರುಗೇಂದ್ರ ಸಜ್ಜನ್ ಶೆಟ್ಟಿ ಕಸಪ ಗೌರವ ಕಾರ್ಯದರ್ಶಿಗಳಾದ ಶ್ರೀಕಾಂತ ಸೂಗಿ , ಭುವನೇಶ್ವರಿ , ಕೂಶಾಧ್ಯಕ್ಷರಾದ ಮಾಣಿಕಪ್ಪ ಬಕ್ಕನ,ನಿಕಟ ಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಮಠಪತಿ ಹಾಗೂ ಸಾರಿಕಾ ಗಂಗಾ ,ಗೀತಾ ರೆಡ್ಡಿ ,ವಿಜಯ್ ಕುಮಾರ್ ಶೆಟ್ಟಿ ಮಡಪ್ಪ ಕುಂಬಾರ್, ಶ್ರೀಧರ ಚೌಹಾಣ್ ,ಸಂತೋಷ್ ಆಚಾರಿ , ಸಿಸ್ಟರ್ ಬಸಮ್ಮ ,ಸಂಗೀತ ಕಮಿಟ್ಕರ್ ಶೈಲಜಾ ,ಶಿವಕುಮಾರ್ ಕಂಪ್ಲಿ ಸ್ವಾಗತಿಸಿದರು ಮಲ್ಲಿಕಾರ್ಜುನ ಸಂಗಂಕರ್ ನಿರೂಪಿಸಿದರು ಶ್ರೀಕಾಂತ್ ಸೂಗಿ ವಂದಿದಿದರು ಉಪಸ್ಥಿತರಿದ್ದರು