
ಚಾಮರಾಜನಗರ, ಮೇ.06:- ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅತ್ಯಂತ ಶ್ರೇಷ್ಠ ಸಾಹಿತ್ಯ ಸಾಂಸ್ಕøತಿಕ ಸಂಘಟನೆಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್‍ರವರ ಹಾಗೂ ಪ್ರಥಮ ಅಧ್ಯಕ್ಷರಾದ ನಂಜುಂಡಯ್ಯರವರ ನಿಸ್ವಾರ್ಥ ಸೇವೆ ಹಾಗೂ ಸರ್ವ ಅಧ್ಯಕ್ಷರುಗಳು ಶತಮಾನದ ಕನ್ನಡ ಸಾಹಿತ್ಯ ಪರಿಷತ್ತನ್ನು ಅತ್ಯಂತ ಪ್ರಾಮಾಣಿಕತೆಯ ಮೂಲಕ ಮುನ್ನಡೆಸಿದ್ದಾರೆ ಎಂದು ಶ್ರೀ ಪತಂಜಲಿ ಯೋಗ ಸಮಿತಿಯ ಮುಖ್ಯಸ್ಥರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಯೋಗ ಪ್ರಕಾಶ್ ತಿಳಿಸಿದರು.
ಅವರುತಾಲೂಕುಕನ್ನಡ ಸಾಹಿತ್ಯ ಪರಿಷತ್ತು ಶ್ರೀ ವಾಣಿಜ್ಯ ಹಾಗೂ ಕಂಪ್ಯೂಟರ್ ವಿದ್ಯಾಸಂಸ್ಥೆಆವರಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನ ದಿನಾಚರಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಬದ್ಧತೆಯಾಗಬೇಕು. ಕನ್ನಡ ಸಾಹಿತ್ಯ ಪರಿಷತ್ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠ ಸಂಸ್ಥೆಯಾಗಿರೂಪುಗೊಂಡಿರುವುದು ಅತ್ಯಂತ ಹೆಮ್ಮೆಯಾಗಿದೆಎಂದು ತಿಳಿಸಿದರು.
ಕನ್ನಡ ಅಸ್ಮಿತೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಕುರಿತುಉಪನ್ಯಾಸವನ್ನು ಸರ್ಕಾರಿ ಪದವಿ ಕಾಲೇಜಿನ ಗ್ರಂಥಪಾಲಕರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ವಿಭಾಗ ಮುಖ್ಯಸ್ಥರು ಆದ ಬಾಲಸುಬ್ರಹ್ಮಣ್ಯಂರವರು ನೆರವೇರಿಸಿ ಶತಮಾನದಕನ್ನಡ ಸಾಹಿತ್ಯ ಪರಿಷತ್ ನಿತ್ಯ ನಿರಂತರವಾಗಿ ನಾಡಿನ ಸಾಹಿತ್ಯ, ಬರವಣಿಗೆ,ವಿಮರ್ಶೆ ಹಾಗೂ ಭಾವೈಕ್ಯತೆ ಮೂಡಿಸುವ ದಿಕ್ಕಿನಲ್ಲಿ ಅಪಾರ ಕಾರ್ಯವನ್ನು ಮಾಡುತ್ತಿದೆ. ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ವಿವಿಧದೃಷ್ಟಿಕೋನದಿಂದ ಎಲ್ಲಾ ಕನ್ನಡಿಗರನ್ನು ಒಂದುಗೂಡಿಸಿ, ಕನ್ನಡದ ಸಂಸ್ಕೃತಿಯ ಚಿಂತನೆಯನ್ನು ಸದಾ ಕಾಲ ನೆನಪಿಸುತ್ತ, ಕಟ್ಟುವಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ.
ಮೇ 5 ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ. ಕೈಗಾರಿಕೆ, ನೀರಾವರಿ, ಅಭಿವೃದ್ಧಿ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಹಾಗೂ ಸಾಂಸ್ಕೃತಿಕ ವಿಭಿನ್ನತೆಯ ನಡುವೆ ಒಂದುಗೂಡಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಗಿದೆ. ಕನ್ನಡವನ್ನು ನಿತ್ಯ ಬಳಸುವ ಮೂಲಕ ಕನ್ನಡತನವನ್ನು ನಾವೆಲ್ಲರೂ ಸದಾ ಕಾಲ ಉಳಿಸಿ ಬೆಳೆಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ ತಮಿಳುನಾಡು ಮಾತು ಕೇರಳದ ಗಡಿಭಾಗವಾದ ಚಾಮರಾಜನಗರ ತನ್ನದೇ ಆದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಶ್ರೀಮಂತಿಕೆ ಪರಂಪರೆಯನ್ನು ಹೊಂದಿದ್ದು ಕನ್ನಡ ಭಾμÉ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವೆಂದು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ನಾಡಿನ ಹೆಮ್ಮೆಯ ಸಂಸ್ಥೆಯನ್ನು ಕಟ್ಟಿ ಬೆಳೆಸುವ ದಿಕ್ಕಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡ ಬೇಕೆಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬಂಗಾರ ನಾಯಕ, ಲೇಖಕ ಲಕ್ಷ್ಮಿ ನರಸಿಂಹ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕಲೆ ನಟರಾಜು , ಶ್ರೀಮತಿ ಪದ್ಮಾಕ್ಷಿ, ಕೋಶಾಧ್ಯಕ್ಷ ಮಹದೇವಪ್ಪ, ಬಿಕೆ ಆರಾಧ್ಯ, ರವಿಚಂದ್ರ ಪ್ರಸಾದ, ಆರ್. ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಕಲೆ ನಟರಾಜು ಹಾಗೂ ಪದ್ಮಾಕ್ಷಿರವರು ಕನ್ನಡ ಗೀತೆಯ ಗಾಯನವನ್ನು ನಡೆಸಿಕೊಟ್ಟರು.