ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಪಲುಗುಲ ನಾಗರಾಜ ನಾಮಪತ್ರ ಸಲ್ಲಿಕೆ

ರಾಯಚೂರು.ಏ.೦೧-ಮೇ.೯ ರಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯಲಿದ್ದು ರಾಯಚೂರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ, ಚಿಂತಕ, ಸಂಘಟಕ ಪಲುಗುಲ ನಾಗರಾಜ ರವರು ಇಂದು ಬೆಳಿಗ್ಗೆ ನಗರದ ತಹಸೀಲ್ ಕಚೇರಿಯಲ್ಲಿ ಉಪ ತಹಸೀಲ್ದಾರ ಸೈಯದ್ ಮೀರ ಅನ್ವರ್ ರವರಿಗೆ ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್‌ನ ಬಲ್ಲಟಗಿ ಜಯಪ್ರಕಾಶ ರವರು ಸೂಚಕರಾದರು. ರಿಪಬ್ಲಿಕನ್ ಸೇನಾ ಜಿಲ್ಲಾ ಅಧ್ಯಕ್ಷರಾದ ಶೇಖರ ರಾಂಪೂರ, ಶ್ರೀ ರಾಮಚಂದ್ರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೊಂಡ ವೆಂಕಟೇಶ, ಪಲುಗುಲ ನಾಗರಾಜ ಶ್ರೀನಿವಾಸ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಪಲುಗುಲ ವೀರೇಶ, ಕೋಶಾಧ್ಯಕ್ಷ ಪಲುಗುಲ ಚಿನ್ನಯ್ಯ ರವರು ಹಾಜರಿದ್ದರು.