ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸಕ ಎಸ್ ಎ ರವೀಂದ್ರನಾಥ್ ಗೆ ಸನ್ಮಾನ

ದಾವಣಗೆರೆ ಜ ೨೨; ಹಾವೇರಿಯಲ್ಲಿ ನಡೆದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಲು ಎಸ್ ಎ ರವೀಂದ್ರನಾಥ್ ರವರಿಗೆ ಅನಾರೋಗ್ಯ ನಿಮಿತ್ತ  ಸಾಧ್ಯವಾಗಿರಲಿಲ್ಲವಾದ್ದರಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಷಿಯವರು  ಖಾಸಗಿ ಕಾರ್ಯಕ್ರಮದ ನಿಮಿತ್ತ ದಾವಣಗೆರೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ  ದಾವಣಗೆರೆ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿ ರುದ್ರಯ್ಯ ನವರ ಜೊತೆಗೂಡಿ ಎಸ್ ಎ ರವೀಂದ್ರನಾಥ್  ಮನೆಗೆ ತೆರಳಿ ಗೌರವ ಪೂರ್ವಕವಾಗಿ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಡಾ. ಮಹೇಶ್ ಜೋಷಿ ಯವರು ಮಾತನಾಡಿ ಎಸ್ ಎ ರವೀಂದ್ರನಾಥ್ ರ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು, ಕನ್ನಡಾಭಿಮಾನವನ್ನು ಹಾಗೂ ದೀರ್ಘ ಕಾಲದ ರೈತ ಪರ ಹೋರಾಟವನ್ನು, ಅವರ ಸಾಮಾಜಿಕ ಕಳಕಳಿ ಮತ್ತು ಸೇವೆಯನ್ನು  ಪರಿಷತ್ತು ಸದಾ ಸ್ಮರಿಸುತ್ತದೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿಮ್ಮನ್ನು ಹೃದಯತುಂಬಿ ಹರಸಿ ಸನ್ಮಾನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿ ಗೌರವ ಸಮರ್ಪಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ ಎ ರವೀಂದ್ರನಾಥ್  ಮಾತನಾಡುತ್ತಾ ಹಾವೇರಿಯ ಯಶಸ್ವಿ ಸಮ್ಮೇಳನವನ್ನು ನಾನು ದೂರದರ್ಶನದಲ್ಲಿ ವೀಕ್ಷಿಸಿ ಸಂತಸ ಪಟ್ಟಿದ್ದೇನೆ ಎಂದು ಸಮ್ಮೇಳನದ ಬಗ್ಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ  ಬಿ. ವಾಮದೇವಪ್ಪನವರು ಮಾತನಾಡಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾ ಭೂತೋ ನಾ ಭವಿಷ್ಯತಿ ಎನ್ನುವಂತೆ ಅತ್ಯಂತ ಯಶಸ್ವಿಯಾಗಿ ಯಾವುದೇ ಲೋಪವಿಲ್ಲದಂತೆ ನಡೆದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ ಎಂಬುದನ್ನು ಎಸ್ ಎ ರವೀಂದ್ರನಾಥ್ ರ ಗಮನಕ್ಕೆ ತರುತ್ತಾ,ಕನ್ನಡಸಾಹಿತ್ಯ  ಪರಿಷತ್ತಿನ ಈ ಸನ್ಮಾನವನ್ನು ಹಿರಿಯರಾದ ತಾವುಗಳು ಅಭಿನಮಾನದಿಂದ ಸ್ವೀಕರಿಸಿದ್ದಾಕ್ಕಾಗಿ  ದಾವಣಗೆರೆ ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿಗಳ ಪರವಾಗಿ ಅವರಿಗೆ ಗೌರವಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ ಜಿ ಜಗದೀಶ್ ಕೂಲಂಬಿ,  ದಾವಣಗೆರೆ ತಾಲ್ಲೂಕು ಕ  ಸಾ ಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ, ಜಿಲ್ಲಾ ಪದಾಧಿಕಾರಿ ಶ್ರೀಮತಿ ರುದ್ರಾಕ್ಷಿಬಾಯಿ, ತಾಲ್ಲೂಕು ಪದಾಧಿಕಾರಿಗಳಾದ ಬೇತೂರು ಷಡಾಕ್ಷರಪ್ಪ,ಶಿವಕುಮಾರ್ ಆರ್, ಹರಿಹರ ತಾಲ್ಲೂಕು ಕ ಸಾ ಪ ಸಂಘಟನಾ ಕಾರ್ಯದರ್ಶಿ ಸದಾನಂದ್ ಕುಂಬಳೂರು ಮತ್ತಿತರರು ಉಪಸಿತರಿದ್ದರು.