ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕಣವಿ ದಂಪತಿಗಳು

ಧಾರವಾಡ,ಡಿ2 : ಸಮನ್ವಯ ಕವಿ ಚೆಂಬೆಳಕಿನ ಚೆನ್ನವೀರಕಣವಿಯವರು ಬದುಕನ್ನುಕಟ್ಟಿಕೊಂಡದ್ದುಧಾರವಾಡದಿಂದಲೇಅವರನ್ನುಕವಿಯಾಗಿ ರೂಪಿಸಿದ್ದು ಧಾರಾನಗರಿಯೇ. ಇಂದಿನ ಯುವ ಪೀಳಿಗೆಯು ಇಂತಹಉತ್ಕøಷ್ಟ ಸಾಹಿತಿಗಳಿಂದ ಪ್ರೇರಣೆ ಪಡೆದು ಸಾಹಿತ್ಯರಚಿಸಬೇಕೆಂದುಧಾರವಾಡದ ಹಿರಿಯ ವಿಮರ್ಶಕಡಾ ಜಿ. ಎಂ. ಹೆಗಡೆ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು 68ನೇ ಕರ್ನಾಟಕರಾಜ್ಯೋತ್ಸವ ಕರ್ನಾಟಕ ಸಂಭ್ರಮ-50'ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ನಾಡ ಹಬ್ಬದ ತಿಂಗಳ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ನಾಡೋಜಡಾ.ಚೆನ್ನವೀರಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಕಣವಿ ದಂಪತಿಗಳು ಯುವ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ.ದಂಪತಿಗಳು ಸಾಹಿತ್ಯದಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.ಕಾವ್ಯದಕಣಜವಾಗಿರುವಅವರುಕಾವ್ಯ ಪರಂಪರೆಯನ್ನೇ ಸೃಷ್ಟಿಸಿದ್ದಾರೆ ಎಂದರು.
ಹಿರಿಯ ಸಾಹಿತಿಡಾ.ಬಸು ಬೇವಿನಗಿಡದ ಮಾತನಾಡಿ, ಶಾಂತಾದೇವಿ ಕಣವಿಯವರು ಸ್ತ್ರೀ-ಸಂವೇದನೆಗಳ ಕುರಿತು ಅನೇಕ ಕಥೆಗಳನ್ನು ಕಥಾಲೋಕಕ್ಕೆ ನೀಡಿದ್ದಾರೆಂದರು.
ಬಹುಮಾನ ವಿತರಣೆ ಮಾಡಿಧಾರವಾಡಕರ್ನಾಟಕ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯೆಡಾ.ರಾಜೇಶ್ವರಿ ಮಹೇಶ್ವರಯ್ಯ, ನಡೆ ನುಡಿಗಳಲ್ಲಿ ಒಂದಾದಆದರ್ಶ ದಂಪತಿಗಳನ್ನು ಸ್ಮರಿಸಿದರು.
ಚೆನ್ನವೀರಕಣವಿ ಕಾವ್ಯ ಸ್ಪರ್ಧೆಯಲ್ಲಿ ಬಬಲೇಶ್ವರತಾಲೂಕಜೈನಾಪುರದ ಕು.ಸುನೀತಾಗುರಯ್ಯಗಣಾಚಾರಿಯವರ ನೆನಪಾಗಿ ನನ್ನ ಪ್ರೇಮದ ಬದುಕು' ಕಾವ್ಯ ಪ್ರಥಮ ಸ್ಥಾನ, ದಾವಣಗೆರೆಯ ಕು.ಸೃಜನ ಬಿ.ಎನ್. ಅವರಧರ್ಮಲೋಕ’ ಕಾವ್ಯ ದ್ವಿತೀಯ ಸ್ಥಾನ ಹಾಗೂ ಬೆಳಗಾವಿಯ ಚಂದೂರಿನ ಕು. ವಿನಾಯಕಯ.ನಂದಿ ಅವರ ಹಳ್ಳಿ ಮತ್ತು ನಗರ’ ಕಾವ್ಯಗಳು ತೃತೀಯ ಸ್ಥಾನ ಪಡೆದವು.
ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿಕಾಸರಗೋಡಿನ ಪಿಲಿಕುಂಡದ ಕು.ದೇವಿಕಾ ಪಿ. ಅವರಆಸರೆಕಥೆ ಪ್ರಥಮ ಸ್ಥಾನ, ಅಥಣಿಯಚಿಕ್ಕೂಡದ ಕು.ಆಶಾ ಮಾಚಕನೂರಅವರಅಂತಃಕರಣ ದ್ವಿತೀಯ ಸ್ಥಾನ ಹಾಗೂ ತುಮಕೂರಿನ ಕು.ಚಂದನ್‍ಡಿ.ಎನ್. ಅವರತಿರುವುಕಥೆತೃತೀಯ ಸ್ಥಾನ ಪಡೆದವು. ವಿಜೇತರಾದಎಲ್ಲರಿಗೂ ಸ್ಮರಣಿಕೆ, ಪ್ರಮಾಣ ಪತ್ರ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.
ಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಿಯದರ್ಶಿನಿ ಕಣವಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕೊತಬಾಳದ ಜಾನಪದಕಲಾವಿದ ಶಂಕರಣ್ಣ ಸಂಕಣ್ಣವರಿಗೆ `ಜನಪದ ಸಿರಿ’ ಗೌರವ ಸನ್ಮಾನ ಮಾಡಲಾಯಿತು.
ಪ್ರೊ.ಮಾಲತಿ ಪಟ್ಟಣಶೆಟ್ಟಿಅಧ್ಯಕ್ಷೀಯ ನುಡಿಗಳನ್ನಾಡಿದರು.ದತ್ತಿದಾನಿ ಶಿವಾನಂದ ಕಣವಿ ಮಾತನಾಡಿದರು.
ಶಂಕರ ಕುಂಬಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ. ಶೈಲಜಾಅಮರಶೆಟ್ಟಿ ನಿರೂಪಿಸಿ, ವಂದಿಸಿದರು.