ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ಪ್ರಮುಖವಾದುದು


ಸಂಜೆವಾಣಿ ವಾರ್ತೆ
 ಕೊಟ್ಟೂರು ಜು 26 : ಕನ್ನಡ ಸಾಹಿತ್ಯದಲ್ಲಿ  ದಾಸ ಸಾಹಿತ್ಯ ಪ್ರಮುಖವಾದುದು ಎಂದು ಸನ್ನಿಧಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಸಿಂಧೂ ಗಿರೀಶ್ ರವರು ತಿಳಿಸಿದರು.
 ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕೊಟ್ಟೂರು ತಾಲೂಕು ಘಟಕದ ವತಿಯಿಂದ ಕೊಟ್ಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಯಲ್ಲಿ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕುರಿತು ಸನ್ನಿಧಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಸಿಂಧೂ ಗಿರೀಶ್ ರವರು ಮಾತನಾಡಿ ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ದಲ್ಲಿ ಶ್ರೇಷ್ಠ ಸಾಹಿತ್ಯ ವಾಗಿದ್ದು.ದಾಸ ಶ್ರೇಷ್ಠ ರಾದ  ಕನಕದಾಸರು ಮತ್ತು ಪುರಂದರದಾಸರು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಾಗಿದ್ದು ಕೀರ್ತನೆಗಳ ಮೂಲಕ ಸಮಾಜದ ತಪ್ಪುಗಳನ್ನು ತಿದ್ದಿದರು ಸಮಾಜದ ಜಾತಿಪದ್ಧತಿಯನ್ನು ವಿರೋಧಿಸಿ ಸಮಾನತೆಯನ್ನು ಪ್ರತಿಪಾದಿಸಿದರು ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ದೇವರಮನಿ ಕೊಟ್ರೇಶ್ ವಹಿಸಿದ್ದರು.ಉದ್ಘಾಟನೆಯನ್ನು  ಮುಖ್ಯ ಗುರುಗಳಾದ ಶ್ರೀ ಸಿ.ಬಸವರಾಜ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೊಟ್ಟೂರು ಥಿಯಾಸಾಫಿಕಲ್ ಸೊಸೈಟಿ ಅಧ್ಯಕ್ಷ ರಾದ ಜೆ.ಎಂ.ಧನಂಜಯ.ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ರಾದ ಶ್ರೀ ರಾಜಣ್ಣ ಕೆ.ಎಂ.ಕೊಟ್ರಯ್ಯ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಮಹಲಿಂಗಪ್ಪ ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿಯಾದ ಅರವಿಂದ್ ಬಸಾಪುರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಶ್ರೀಮತಿ ಮಾಲಿನಿ ಸ್ವಾಗತಿಸಿದರು. ಶಿಕ್ಷಕರಾದ ಆನಂದ್ ಹಳ್ಳಿ ನಿರೂಪಿಸಿದರು.ಈ ಸಂದರ್ಭದಲ್ಲಿ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಮೀನಕೇರಿ ಅಂಜಿನಪ್ಪ ನವರನ್ನು ಕಸಾಪ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.