ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಗೌರವ- ಕೇಶವಪ್ಪ

ಸಿರವಾರ,ಮೇ.೫-ಕನ್ನಡ ಸಾಹಿತ್ಯಕ್ಕೆ ಹಾಗೂ ಪರಿಷತ್ತಿಗೆ ರಾಜ್ಯದಲ್ಲಿ ಹೆಚ್ಚಿನ ಗೌರವಿದೆ ಎಂದು ಬಾಲಕರ ಪ್ರೌಢಶಾಲೆಯಪ್ರಭಾರಿ ಮು.ಗು. ಕೇಶವಪ್ಪ ಹೇಳಿದರು.
ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ದಿನಾಚರಣೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಆಚರಣೆ ಮಾಡಿ ಅಥಿತಿಗಳಾಗಿ ಮಾತನಾಡಿ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪನೆಮಾಡಿ ಇಂದಿಗೆ ೧೦೯ವರ್ಷಗಳು ಇದಕ್ಕೆ ದೊಡ್ಡ ಇತಿಹಾಸವಿದೆ.
ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿಗಳು ಲಭ್ಯಸಿವೆ, ಕನ್ನಡ ಸಾಹಿತ್ಯವನ್ನು ಮಹಿಳೆಯರು, ಯುವಕರು, ಮಕ್ಕಳಿಗೆ ಹೆಚ್ಚಿನ ಆಸಕ್ತಿಯನ್ನು ಮೂಡುವಂತೆ ಮಾಡಬೇಕು ಎಂದರು. ಕಾರ್ಯಕ್ರಮದ ಕುರಿತು ಟಿ.ಬಸವರಾಜ ಕನ್ನಡ ಸಾಹಿತ್ಯ ಪರಿಷತ್ತು ಎನ್ನುವುದ ನಮ್ಮ ಕನ್ನಡಿಗರ ಜೀವಾಡಿಯಾಗಿದೆ ಮತ್ತು ಕಸಾಪ ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತವಾಗಿದೆ, ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಮತ್ತು ನಮ್ಮ ಭಾಗದ ಸಾಹಿತಿಗಳನ್ನು ನಮ್ಮಲ್ಲಿಗೆ ಕರೆಯಿಸಿ ಅವರ ಸಾಹಿತ್ಯದ ಅನುಭವ ನಮಗೆ ನೀಡುವಂತೆ ಕೋರುತ್ತೇನೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಹೀರಾ ಅಧ್ಯಕ್ಷತೆವಹಿಸಿ ಮಾತನಾಡಿ ತಾಲ್ಲೂಕಿನ ಕನ್ನಡ ಭವನ, ಸಾಹಿತ್ಯ ಸಮ್ಮೇಳನ, ಸಾಹಿತ್ಯ ಕಾರ್ಯಕ್ರಮ ಮಾಡಲು ಎಲ್ಲರ ಸಹಕಾರ ಕೋರಿದರು.
ಬಸವೇಶ್ವರ ಕಾಲೇಜಿನ ಅಧ್ಯಕ್ಷ ನರಸಿಂಹರಾವ ಕುಲಕರ್ಣಿ, ಉಪನ್ಯಾಸಕ ಲಕ್ಷ್ಮಣ ಯಾದವ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಟ್ರಸ್ಟ್ ಅಧ್ಯಕ್ಷರಾದ ಜ್ಞಾನಮಿತ್ರ, ಜ್ಞಾನಗಂಗಾ ಶಾಲೆಯ ಅಧ್ಯಕ್ಷಾರದ ವೆಂಕಟರೆಡ್ಡಿ ಬಲ್ಕಲ್, ಪತ್ತಾರ ನಾಗಪ್ಪ, ಶಿವರಾಜ ಬೆಳವಿನೂರು, ಮಲ್ಲಿಕಾರ್ಜುನ ಶಿಕಂಟಿ,ಪತ್ರಕರ್ತ ಸೂಗುರೇಶ ಹಿರೇಮಠ, ಮಹ್ಮದ ಅಲಿ ಇದ್ದರು.