ಕಲಬುರಗಿ,ಜು.15: ಕನ್ನಡ ಸಾಹಿತ್ಯಕ್ಕೆ ಬ್ರಾಹ್ಮಣರು ನೀಡಿದ ಕೊಡುಗೆ ಮರೆಯುವಂತಿಲ್ಲ ಎಂದು ಪಂ. ಪ್ರಸನ್ನಾಚಾರ್ಯ ಜೋಶಿ ಅವರು ಅಭಿಮತ ವ್ಯಕ್ತಪಡಿಸಿದರು.
ಜಯತೀರ್ಥ ನಗರದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದಿಂದ ಆಯೋಜಿಸಿದ್ದ ಕಸಾಪ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ,
ಕನ್ನಡ ಸಾಹಿತ್ಯ, ಭಾಷೆ, ಜಲ, ನೆಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಹೊಂದಿರಬೇಕು. ಕನ್ನಡ ಭಾಷೆ ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಅವರು, ಕನ್ನಡ ಸಾಹಿತ್ಯ ಪರಿಷತ್‍ಗೆ ಶಕ್ತಿ ತುಂಬುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಡಾ. ನಾಡೋಜ ಮಹೇಶ ಜೋಶಿ ಅವರು ಒಂದು ಕೋಟಿ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದಾರೆ. ಕೇವಲ ಸಾಹಿತಿಗಳೇ ಪರಿಷತ್ತಿನ ಸದಸ್ಯರಾಗಬೇಕೆಂಬ ನಿಯಮವಿಲ್ಲ .
ಮೋಬೈಲ್‍ನಲ್ಲಿ ಕಸಾಪ ಆ್ಯಪ್ ಡೌನ್‍ಲೌಡ್ ಮಾಡಿಕೊಂಡು ಆ ಮೂಲಕ ಸದಸ್ಯರಾಗಬೇಕು ಎಂದರು.ವಿಪ್ರ ಸಮಾಜದ ಮುಖಂಡ ರವಿ ಲಾತೂರಕರ ಅವರು ಮಾತನಾಡಿ,ಜಯತೀರ್ಥ ನಗರದ ಪ್ರತಿಯೊಂದು ಮನೆಮನೆಗೆ ತೆರಳಿ ಸದಸ್ಯರಾಗುವಂತೆ ಮನವಿ ಮಾಡುವೆ. ಸದಸ್ಯತ್ವ ಅಭಿಯಾನದ ಜತೆಯಲ್ಲಿ ಕನ್ನಡದ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವ ಕೆಲಸ ಮಾಡುವೆ. ಎಲ್ಲರೂ ಸದಸ್ಯರಾಗುವ ಮೂಲಕ ಕಸಾಪಕ್ಕೆ ಶಕ್ತಿ ತುಂಬಬೇಕು ಎಂದರು.ಕಸಾಪ ದಕ್ಷಿಣ ವಲಯದ ಗೌರವ ಕಾರ್ಯದರ್ಶಿ ಧನೇಶ ಮಾಲಗತ್ತಿ, ಸಹ ಕಾರ್ಯದರ್ಶಿ ಮಲ್ಲಿನಾಥ ಸಂಗಶೆಟ್ಟಿ, ಅಪ್ಪಾರಾವ ಟಕ್ಕಳಕಿ ಹಾಗೂ ಬಡಾವಣೆ ಪ್ರಮುಖರು ಪಾಲ್ಗೊಂಡರು.