ಕನ್ನಡ ಸಾರಸ್ವತ ಲೋಕಕ್ಕೆ ಲಿಂಗರಾಜ ಶಾಸ್ತ್ರಿ ಕೊಡುಗೆ ಅಪಾರ

ಕಲಬುರಗಿ :ಸೆ.23: ಇತ್ತೀಚಿಗೆ ನಿಧನ ಹೊಂದಿದ ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಅವರಿಗೆ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಡಾ.ಲಿಂಗರಾಜ ಶಾಸ್ತ್ರಿ ಅವರು ಒಬ್ಬ ಉತ್ತಮ ಸಾಹಿತಿ, ಬರವಣಿಗೆಗಾರ, ವಾಗ್ಮೀಯಾಗಿದ್ದರು. ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಸಾಹಿತ್ಯದ ಒಡನಾಟ ಹೊಂದಿದ್ದರು. ಅವರ ಈ ಅಕಾಲಿಕ ಮರಣದಿಂದ ಕನ್ನಡ ಸಾಹಿತ್ಯ ಲೋಕ ಬಡವಾಯಿಗಿದೆ. ಶರಣಬಸವ ವಿವಿಯ ಮೌಲ್ಯಮಾಪನ ಕುಲಸಚಿವರಾಗಿ ಸೇವೆಗೈಯುತ್ತ ಸಾಹಿತ್ಯದ ಅಭಿರುಚಿ ಹೊಂದಿದ್ದರು. ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ದ ಶಾಸ್ತ್ರಿ ಅವರು ಉತ್ತಮ ಆಡಳಿತಗಾರರಾಗಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯೆರಾಗಿ ಮತ್ತು ಶರಣಬಸವ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಕುಲಸಚಿವರಾಗಿ ಸಂಸ್ಥಾನದ ಅನೇಕ ಸಾಂಸ್ಕøತಿಕ, ಧಾರ್ಮಿಕ ಸಮಾರಂಭಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು ಎಂದು ಸ್ಮರೀಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪುಟ್ಟಮಣಿ ದೇವಿದಾಸ, ಡಾ.ಸೀಮಾ ಪಾಟೀಲ, ಶ್ರೀಮತಿ ಜಾನಕಿ ಹೊಸೂರ, ಕೃಪಾಸಾಗರ ಗೊಬ್ಬುರ ಶಾಸ್ತ್ರಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಂಗೀತಾ ಪಾಟೀಲ, ಶ್ರೀಮತಿ ಪದ್ಮಜಾ ವೀರಶೆಟ್ಟಿ, ಶ್ರೀಮತಿ ದಾಕ್ಷಾಯಣಿ ಕಾಡಾದಿ, ಶ್ರೀಮತಿ ಕಲ್ಪನಾ ಡಿ, ವೀರಭದ್ರಯ್ಯ ಸ್ಥಾವರಮಠ, ಬೋಧಕೇತ ಸಿಬ್ಬಂದಿ ವಿನೋದ ಹಳಕಟ್ಟಿ, ಅಪ್ಪಾಸಾಬ ಬಿರಾದಾರ, ಶ್ರೀಮತಿ ಅನುಸೂಯ ಬಡಿಗೇರ, ಶ್ರೀಮತಿ ಶಶಿಕಲಾ ಪಾರಾ, ಶ್ರೀಮತಿ ಪ್ರಭಾವತಿ ಹೆಚ್. ಮತ್ತಿತರರು ಇದ್ದರು.