ಕನ್ನಡ ಸಂಸ್ಕøತಿ ವೈವಿಧ್ಯಮಯ ಸಂಸ್ಕತಿ

ಕಲಬುರಗಿ:ನ.18:ಶೂನ್ಯ ಸಂಪಾದನೆಗಳು ಕನ್ನಡದ ಸೋಪಜ್ಞ ಪ್ರಜ್ಞೆಯಿಂದ ಉಂಟು ಮಾಡುವಂತಹ ಅಪರೂಪದ ಸಾಹಿತ್ಯ ಕೃತಿಗಳು. ಕನ್ನಡದಲ್ಲಿ ಇಂತಹ ಕೃತಿಗಳು ರಚನೆಯಾಗಿದ್ದು ದಕ್ಷಿಣ ಭಾರತದ ಸಾಹಿತ್ಯ ಚರಿತ್ರೆಯಲ್ಲಿಯೇ ಈ ಬಗೆಯ ಒಂದು ಸೃಷ್ಟಿಶೀಲ ಪ್ರಕ್ರಿಯೆಯ ಸೃಜನ ಶೀಲ ಪ್ರಯೋಗ ನಮಗೆ ಎಲ್ಲ್ಲಿಯೂ ಕಂಡು ಬರುವುದಿಲ್ಲ.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಂಗಳ ಜ್ಯೋತಿ ಶರಣ ಗಾಣದ ಕಣ್ಣಪ್ಪಯ್ಯ ಸಮಾಜದವತಿಯಿಂದ ಹಮ್ಮಿಕೊಂಡ ಅರಿವಿನ ಮನೆ 645 ನೆಯ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಸಂಸ್ಕøತಿ’ ಎಂಬ ವಿಷಯದ ಮೇಲೆ ಪ್ರಾಧ್ಯಾಪಕರಾದ ಡಾ. ಮೃತ್ಯುಂಜಯ ರುಮಾಲೆಯವರು ಶಿವಗಣಪ್ರಸಾದಿ ಮಹಾದೇವಯ್ಯ ಪೂರ್ವದಲ್ಲಿದಂತಹ ಹನ್ನೆರಡನೆಯ ಶÀತಮಾನದ ಎಲ್ಲ ಶರಣರ ವಚನಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ವಿಷಯವಾರು ಅವುಗಳನ್ನು ಜೋಡಿಸಿ, ಅವುಗಳಿಗೆ ಒಂದು ಕಥಾಸ್ವರೂಪವನ್ನು ಕೊಟ್ಟು, ನಂತರದ ಎಲ್ಲ ಶರಣ ಸಂಸ್ಕøತಿಯ ಆಸಕ್ತರಿಗೆ ಹನ್ನೆರಡನೆಯ ಶತಮಾನದಲ್ಲಿ ನಡೆದಂತಹ ಶರಣರ ಜೀವನ ಚಿತ್ರ ಯಾವ ರೀತಿಯಾಗಿ ಇರಬಹುದು ಎಂದು ತೋರಿಸಿದಂತಹ ಅಪರೂಪದ ಕೆಲಸವನ್ನು ಶೂನ್ಯ ಸಂಪಾದನೆಯ ರಚನೆಯ ಮೂಲಕ ಮಾಡಿದ್ದು ಒಂದು ಅಪರೂಪದ ಕಾರ್ಯ. ಸದ್ಯದ ಸ್ಥಿತಿಯಲ್ಲಿ ಹತ್ತು ಜನ ವಿದ್ವಾಂಸರು ಕುಳಿತು ಮಾಡುವ ಕೆಲಸವನ್ನು ಶಿವಗಣ ಪ್ರಸಾದಿ ಮಹಾದೇವಯ್ಯ ಹನ್ನೆರಡನೆಯ ಶತಮಾನದ ಎಲ್ಲ ಶರಣರ ವಚನಗಳನ್ನು ಸುಸಂಬದ್ಧವಾಗಿ ಜೋಡಿಸಿ ಶÀರಣ ಸಂಸ್ಕøತಿಯ ಪಠ್ಯ ಎನ್ನುವ ರೀತಿಯಲ್ಲಿ ತನ್ನ ಶೂನ್ಯ ಸಂಪಾದನೆಯನ್ನು ರಚಿಸಿದ್ದು ಒಂದು ಅಪರೂಪದ ಸಂಗತಿಯಾಗಿದೆ.

ಕನ್ನಡ ಸಂಸ್ಕøತಿಯ ಕುರಿತು ವಿಚಾರ ಮಾಡುವಾಗ ಶೂನ್ಯ ಸಂಪಾದನೆ ಒಂದು ಮಹತ್ವದ ಕೃತಿಯಾಗಿ ಕಂಡುಬರುತ್ತದೆ. ಹನ್ನೆರಡನೆಯ ಶತಮಾನದ ಶರಣರ ಒಟ್ಟು ಬದುಕಿನ ಸಾಂಸ್ಕøತಿಕ ಹಿನ್ನೆಲೆಯನ್ನು ಪರಿಚಯಿಸಲು ಶೂನ್ಯಸಂಪಾದನೆ ಕನ್ನಡ ಸಾಹಿತ್ಯ ಲೋಕದ ಅಪರೂಪದ ಕೃತಿಯಾಗಿದೆ.

ಕನ್ನಡ ಸಂಸ್ಕøತಿಯನ್ನು ಉಸಿರಾಡುವ ಜನ 1956ರಲ್ಲಿ ಏಕೀಕರಣದ ಮೂಲಕ ಒಂದಾಗಿದ್ದು ಒಂದು ಐತಿಹಾಸಿಕ ಸಂಗತಿ. ಕನ್ನಡಿಗರ ಆಶೋತ್ತರಗಳು ಈ ಸಂದರ್ಭದಲ್ಲಿ ಒಂದು ನಕ್ಷೆಗೆ ಒಳಪಟ್ಟಿದ್ದು ಉಲ್ಲೇಖನೀಯ ಸಂಗತಿ. ಕವಿರಾಜ ಮಾರ್ಗಕ್ಕಿಂತ ಪೂರ್ವದಲ್ಲಿ ಗಂಗರು ಈ ಭಾಗವನ್ನು ಅಳುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ಕುದುರೆಗಳು ಉತ್ತರದ ಗಂಗಾನದಿಯಲ್ಲಿ ನೀರು ಕುಡಿಯುತ್ತಿದ್ದವು ಎಂದು ಸಂಜಾನನಶಾಸನ ಉಲ್ಲೇಖ ಮಾಡುತ್ತದೆ. ಗಂಗರ ಕಾಲದಿಂದ ನಕ್ಷೆ ಬದಲಾಗುತ್ತಾ ಹೋಯಿತು. ಇದು ಕನ್ನಡಿಗರ ಇಚ್ಛಾ ಶಕ್ತಿಯ ಕೊರತೆಯಿಂದಾದ ಘಟನೆ ಎನ್ನಬಹುದು. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಹಂಪೆಯನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡಿದÀಂತಹ ನಾಲ್ಕು ರಾಜ ವಂಶಗಳೆಂದರೆ ಸಂಗಮ, ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ಕರ್ನಾಟಕ ರಾಜ್ಯವೆಂದು ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿತ್ತು ಇದು ನಾವು ಅಭಿಮಾನ ಪಡುವಂತಹ ಸಂಗತಿ ಎನ್ನಬಹುದು. ಕನ್ನಡ ಸತ್ವ ಅಡಗಿದ್ದು 9ನೆಯ ಶತಮಾನದ ಕವಿರಾಜಮಾರ್ಗ ಮತ್ತು ಹತ್ತನೆಯ ಶತಮಾನದ ಆದಿಕವಿ ಪಂಪನ ಸಾಹಿತ್ಯದಿಂದ ಎಂದು ಕಡೆಂಗೊಡ್ಲು ಶಂಕರಭಟ್ಟರು ಅಭಿಪ್ರಾಯ ಪಡುತ್ತಾರೆ. ಆ ಕನ್ನಡದ ಸತ್ವವನ್ನು ಹನ್ನೆರಡನೆಯ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸುವುದರ ಮೂಲಕ ಇಮ್ಮಡಿಗೊಳಿಸಿದರು ಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ಶರಣಕುಮಾರ ಬಿಲ್ಲಾಡ ಉಪಸ್ಥಿತ್ತರಿದ್ದರು. ಶ್ರೀ ಹೆಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.