ಕನ್ನಡ ಸಂಸ್ಕೃತಿ ಉಳಿಸಿ ಬೆಳಸಿ-ನಂಜೇಗೌಡ

ಮಾಲೂರು, ನ.೩- ಕರ್ನಾಟಕ ಏಕೀಕರಣವಾದ ದಿನವಾಗಿದೆ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಭಾಷೆ ಬಳಕೆ ರಾಜ್ಯ ಸರ್ಕಾರ ಕಡ್ಡಾಯ ಮಾಡಬೇಕು ತಾಲೂಕಿನ ಜನರು ಕನ್ನಡ ಭಾಷೆ ಉಳಿವಿಗಾಗಿ ಕನ್ನಡದಲ್ಲಿ ಮಾತನಾಡಬೇಕು ಪ್ರತಿಯೊಬ್ಬ ಕನ್ನಡಿಗರು ಅನ್ಯ ಭಾಷಿಗರಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡ ಭಾಷೆ ಪ್ರಾಚೀನವಾದದ್ದು ಅದೇ ರೀತಿ ಶ್ರೀಮಂತವಾದದ್ದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕವಿಗಳು ಸಾಹಿತಿಗಳು ಅಪಾರವಾದ ಕೊಡುಗೆಯನ್ನು ನೀಡಿರುವುದರಿಂದ ೯ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದೆ ಎಂದರು.
ತಾಲೂಕು ಆಡಳಿತ ಮತ್ತು ಕನ್ನಡಪರ ಸಂಘಟನೆಗಳು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಪ್ರತಿವಷ ನವಂಬರ್ ೧ರಂದು ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಆದರೆ ಈ ವಷ ಕೋರೋನ ಸೋಂಕಿನಿಂದ ರಾಜ್ಯೋತ್ಸವದ ಮೇಲೆ ಕರಿನೆರಳು ಬಿದ್ದಿದೆ. ಪ್ರತಿ ವಷ ಸಾರ್ವಜನಿಕ ಕಾರ್ಯಕ್ರಮಗಳು ರಂಗಮಂದಿರದಲ್ಲಿ ಸಾಂಸ್ಕೃತಿಕವಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದೆವು. ಈ ವಷ ಕರೋನಾ ಸೋಂಕು ಚುನಾವಣೆ ನೀತಿಸಂಹಿತೆಯಿಂದ ಕಾರ್ಯಕ್ರಮಗಳು ಹಾಗೂ ಅದ್ದೂರಿ ಮೆರವಣಿಗೆ ಜಿಲ್ಲಾಡಳಿತ ಅನುಮತಿ ನೀಡದ ಕಾರಣ ತಾಲ್ಲೂಕು ಆಡಳಿತ ಸರಳ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹತ್ತನೇ ತರಗತಿ ಹಾಗೂ ಪಿಯುಸಿ ಎಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ತಹಶೀಲ್ದಾರ್ ಎಂ. ಮಂಜುನಾಥ್ ಮಾತನಾಡಿರಾಜ್ಯ ಸರ್ಕಾರ ಆಡಳಿತ ಭಾಷೆ ಕನ್ನಡ ಭಾಷೆಯನ್ನು ಎಲ್ಲ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ ಸರೋಜಿನಿ ಮಹಿಷಿ ವರದಿಯು ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ ಸಾಹಿತಿಗಳು ಕವಿಗಳು ಸಾಹಿತ್ಯಾತ್ಮಕವಾಗಿ ಕೊಡುಗೆ ನೀಡಿದ್ದಾರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಕನ್ನಡ ಭಾಷೆಯಲ್ಲಿ ೧೨೫ ಕ್ಕೆ ೧೨೫ ಅಂಕ ಪಡೆಯುವ ಮೂಲಕ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ.
ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಯಿಂದ ಕನ್ನಡ ಭಾಷೆಯಲ್ಲಿ ಮಾತನಾಡಬೇಕು ಕನ್ನಡ ಪುಸ್ತಕಗಳು ಓದುವ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಅದೇರೀತಿ ನೆಲ-ಜಲ ಭಾಷೆಗೆ ಬಂದಾಗ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂಚೂಣಿಯಲ್ಲಿರಬೇಕು ಎಂದರು.
ತಾಪಂ ಇಒ ಕೃಷಪ್ಪ ಪುರಸಭಾ ಮುಖ್ಯಾಧಿಕಾರಿ ಪ್ರಸಾದ್ ಪುರಸಭಾ ಸದಸ್ಯರಾದ ಪರಮೇಶ್ ಭುವನೇಶ್ವರಿ ಕಲಾಸಂಘದ ತಾಲೂಕು ಅಧ್ಯಕ್ಷರಾದ ಎಂ.ವಿ.ಹನುಮಂತಯ್ಯ, ಲಿಂಗೇಶ್, ಅಶ್ವತ್ ರೆಡ್ಡಿ , ಕನ್ನಡಪರ ಸಂಘಟನೆಗಳ ಕರವೇ ಶ್ರೀನಿವಾಸ್, ಗುಲ್ಜಾರ್, ಅಬ್ಬಯಪ್ಪ, ಹರಿಪ್ರಸಾದ್, ಇನ್ನಿತರರು ಇದ್ದರು.