ಕನ್ನಡ ಶ್ರೀಮಂತ ಬಾಷೆ : ತಹಶೀಲ್ದಾರ್ ಸತ್ಯನಾರಾಯಣ್


ಹಿರಿಯೂರು.ನ.೧: ಕನ್ನಡ ಬಾಷೆ ಶಾಸ್ತ್ರೀಯ ಬಾಷೆ ಕನ್ನಡ ಬಾಷೆ ಸಾಹಿತ್ಯ ಪುರಾತನ ಇತಿಹಾಸ ಪ್ರಸಿದ್ಧವಾಗಿದೆ ಕನ್ನಡ ಸಾಹಿತ್ಯಕ್ಕೆ ೮ ಜ್ಞಾನ ಪೀಠ ಪ್ರಶಸ್ತಿಗಳು ಲಭಿಸಿವೆ ಇದು ಅತ್ಯಂತ ಹೆಮ್ಮೆ ಪಡುವಂಥಹ ವಿಷಯ ಎಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ್ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಏಕೀಕರಣದ ಶುಭ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದು ತುಂಬಾ ಸಂತೋಷದ ವಿಚಾರ ಎಂದರು. ಪ್ರಾಚಾರ್ಯರಾದ ಡಾ.ಡಿ.ಧರಣೇಂದ್ರಯ್ಯನವರು ಮಾತನಾಡಿ ಕನ್ನಡ ನಾಡು ಗಂಧದ ಗೂಡು ಚಿನ್ನದ ನಾಡು ಹೋರಾಟಗಾರರು ಕವಿಗಳು ಕಲಾವಿದರು ಹುಟ್ಟಿ ಬೆಳೆದು ಕಟ್ಟಿದ ನಾಡು ಎಂದರು. ಕನ್ನಡ ಅಕ್ಷರಗಳು ಮುತ್ತಿನಂತೆ ಪೋಣ ಸುವ ಅಕ್ಷರಗಳು ಎಂದರು ಕರ್ನಾಟಕ ಏಕೀಕರಣದ ಬಗ್ಗೆ ತಿಳಿಸಿದರು. ಹಾಗೂ ಪೋಷಕರು ಮಕ್ಕಳಿಗೆ ಕನ್ನಡ ವಿಷಯವನ್ನು ಓದುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ರಾಷ್ಟ್ರಧ್ವಜಾರೋಹಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ನಡೆಯಿತು. ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್ ಮಠದ್ ರೈತ ಗೀತೆ ಹಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ರಾಘವೇಂದ್ರ, ಪಿ.ಎಸ್.ಐ ನಾಗರಾಜ್, ಅನಸೂಯಮ್ಮ, ಪೌರಾಯುಕ್ತರಾದ ಟಿ.ಲೀಲಾವತಿ , ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ, ಕಂದಾಯ ಇಲಾಖೆ ಅಧಿಕಾರಿ, ಲಕ್ಷ್ಮಣ್, ಜೆ..ಪಿ.ಎನ್.ಸ್ವಾಮಿ, ಟಿ.ಶ್ರೀನಿವಾಸ್ ರೆಡ್ಡಿ. ಕ.ಸಾ.ಪ ಅಧ್ಯಕ್ಷ ಮಹಾಸ್ವಾಮಿ, ಶಂಕರ್‌ನಾಗ್ ಕಲಾವೇದಿಕೆ ಅಧ್ಯಕ್ಷ ದಿವುಶಂಕರ್, ಕರ್ನಾಟಕ ಯುವ ಸೇನೆ ಅಧ್ಯಕ್ಷ ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಮದುರೆ, ಉಪ ನೊಂದಣಾಧಿಕಾರಿ ಕಲಾವತಿ, ಬಿ.ಆರ್.ಸಿ. ತಿಪ್ಪೇರುದ್ರಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಉಲ್ಫತ್‌ಬೇಗ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜಚಾರ್, ಸಾಹಿತಿ ಕಿರಣ್‌ಮಿರಜ್ಕರ್ ಮತ್ತಿತರರು ಭಾಗವಹಿಸಿದ್ದರು.