ಕನ್ನಡ ಶಾಲೆಗಳ ಬೆಳವಣಿಗೆಗೆ ಶ್ರಮಿಸಿ: ಶಾಸಕ ಪಾಟೀಲ್

ಹುಮನಾಬಾದ್ :ನ.1: ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕ ಆಡಳಿತ ವತಿಯಿಂದ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಶಾಸಕ ಡಾ. ಸಿದ್ದು ಪಾಟೀಲ್ ಸನ್ಮಾನಿಸಿದರು.

ಬಳಿಕ ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ, ಕನ್ನಡ ಶಾಲೆಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು. ಅಧಿಕಾರದ ಶಿಷ್ಟಾಚಾರ ಕುರಿತು ಮಾತನಾಡುವ ಸ್ಥಳೀಯ ಇಬ್ಬರು ಎಂಎಲ್ಸಿಗಳು ಶಿಷ್ಟಾಚಾರ ಪಾಲಿಸಿ ಸರಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂದು ತಿಳಿಸಿದರು.

ತಹಸೀಲ್ದಾರ್ ಅಂಜುಮ್ ತಬಸುಮ್, ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ. ಇಒ ಡಾ. ಗೋವಿಂದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ, ಶಿವಶಂಕರ ತರನಳ್ಳಿ, ಮಲ್ಲಿಕಾರ್ಜುನ್ ಸಂಗಮಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರಡ್ಡಿ ಮಾಲಿಪಾಟೀಲ್, ಮಾಣಿಕಪ್ಪ ಬಕ್ಕಣ, ವೆಂಕಟ ಜಾಧವ, ಅಕ್ಷರದಾಸೋಹ ಅಧಿಕಾರಿ ಸಂಜೀವಕುಮಾರ ಕಾಂಗೆ, ಸಹಾಯಕ ಕೃಷಿ ನಿರ್ದೇಶಕ ಗೌತಮ್, ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ನಾಗಶಟ್ಟಿ ಡುಮಣಿ, ಎಇಇ ಶಾಮಸುಂದರ ಕಾಳೆಕರ್, ಶಿಶು ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ ಹಿರೇಮಠ, ಸಿಪಿಐ ಜಿ.ಎಂ. ಪಾಟೀಲ್, ಪಿಎಸ್ ಐ ತಿಮ್ಮಯ್ಯ ಇದ್ದರು.