
ಲಕ್ಷ್ಮೇಶ್ವರ,ಜು.21: ತಾಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಳಗಾವಿ ವಿಭಾಗದ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ವಾಲ್ಟರ್ ಹೆಚ್.ಡಿ.ಮೆಲ್ಲೂ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗದಗ ಜಿಲ್ಲೆಯಿಂದ ಬೆಳಗಾವಿ ವಿಭಾಗದ ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿಗಾಗಿ ನಾಮ ನಿರ್ದೇಶನ ಗೊಂಡಿರುವ ಯಲ್ಲಾಪುರ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಹ ನಿರ್ದೇಶಕ ವಾಲ್ಟರ್ ಎಚ್ ಡಿ ಮೆಲ್ಲೂ ಅವರು ಮಾತನಾಡಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಭವ್ಯ ಭಾರತ ನಿರ್ಮಾಣದ ಪ್ರಯೋಗಶಾಲೆಗಳಾಗಿವೆ. ಇಲ್ಲಿ ದೇಶದ ಭವ್ಯ ಭಾರತದ ನಾಗರಿಕರನ್ನು ರೂಪಿಸುವ ವಿಶ್ವವಿದ್ಯಾನಿಲಯಗಳಾಗಿದ್ದು ಕನ್ನಡ ಶಾಲೆಗಳೆ ಶಿಕ್ಷಣದ ತಳಹದಿಯಾಗಿವೆ ಎಂದು ಹೇಳಿದರು.
ನೇತ್ರತ್ವವನ್ನು ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಂ. ಮುಂದಿನಮನಿ ಹಾಗೂ ನೋಡಲ್ ಅಧಿಕಾರಿ ಆರ್. ಎಸ್. ಬುರುಡಿ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಕಟಗಿ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಾಂತನಗೌಡ ಭರಮ ಗೌಡರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಈಶ್ವರ ಮೆಡ್ಲೇರಿ ತಂಡಕ್ಕೆ ಮಾರ್ಗದರ್ಶನ ಮಾಡಿದರು.