ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ6: ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಅವರು ಗೌರವಿಸಿದರು.
ಶಾಸಕರ ನಿವಾಸಕ್ಕೆ ತೆರಳಿದ ಅವರು, ಕನ್ನಡ ವಿವಿಯ ಅಭಿವೃದ್ಧಿ, ಬೆಳವಣಿಗೆಗೆ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಸಕ ಗವಿಯಪ್ಪ ಮಾತನಾಡಿ, ಕನ್ನಡದ ನಾಡು, ನುಡಿ ಬಗ್ಗೆ ಹೆಚ್ಚು ಕಾಳಜಿ,ಕಳಕಳಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಹಕಾರದಿಂದ ದೇಶದಲ್ಲೇ ಅಪರೂಪದ ವಿಶ್ವವಿದ್ಯಾಲಯ ಎನ್ನಿಸಿರುವ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಉಪಕುಲಸಚಿವ ಡಾ. ಎ. ವೆಂಕಟೇಶ ಹಾಗೂ ಸಿಬ್ಬಂದಿ ಹಾಜರಿದ್ದರು.
One attachment • Scanned by Gmail