ಕನ್ನಡ ರಾಜ್ಯೋತ್ಸವ : ಸರಳ ಆಚರಣೆ

ಮಸ್ಕಿ.ನ. ೦೧-ಪಟ್ಟಣದ ನಾನಾ ಸ್ಥಳಗಳಲ್ಲಿ ೬೫ ನೇ ಕನ್ನಡ ರಾಜ್ಯೋತ್ಸವ ಸರಳವಾಗಿ ಭಾನುವಾರ ಆಚರಿಸಲಾಯಿತು ಗಾಂಧಿ ನಗರ ಬಳಿ ಕರವೇ ಅಧ್ಯಕ್ಷ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮುರಾರಿ ಕನ್ನಡಿಗರು ನವಂಬರ್ ಒಂದು ದಿನ ಮಾತ್ರ ಕನ್ನಡಿಗರಾಗ ಬಾರದು ಕನ್ನಡ ಪ್ರತಿ ಯೊಬ್ಬರ ಉಸಿರಾಗ ಬೇಕು ಪ್ರತಿ ಯೊಬ್ಬರು ಕನ್ನಡ ಪ್ರೇಮ ಬೆಳೆಸಿ ಕೊಳ್ಳ ಬೇಕು ಎಂದರು. ಈ ವೇಳೆ ಪತ್ರಕರ್ತ ಅಬ್ದುಲ್ ಅಜೀಜ್ ವಿದ್ಯಾರ್ಥಿಗಳಿಗೆ ಪೆನ್ , ಪುಸ್ತಕ ವಿತರಿಸಿದರು.
ಅಶೋಕ ವೃತ್ತ ಬಳಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಉದ್ಬಾಳ ಕನ್ನಡ ಬಾವುಟ ಹಾರಿಸಿದರು ಕೇಂದ್ರ ಶಾಲೆ ಬಳಿ ಕರವೇ ಅಧ್ಯಕ್ಷ ದುರ್ಗಾರಾಜ ವಟಗಲ್, ಮುದಗಲ್ ಕ್ರಾಸ್ ಹತ್ತಿರ ಕರವೇ ಅಧ್ಯಕ್ಷ ಆರ್ ಕೆ. ನಾಯಕ, ಕವಿತಾಳ ಕ್ರಾಸ್ ಬಳಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರ ಒಡೆಯ ಕನ್ನಡ ಧ್ವಜಾ ರೋಹಣ ನೆರವೇರಿಸಿದರು. ತಹಸೀಲ್ದಾರ್ ಬಲರಾಂ ಕಟ್ಟಿಮನಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಾಪಂ. ಅಧ್ಯಕ್ಷ ಶಿವಣ್ಣ ನಾಯಕ ಪಿಎಸ್ ಏ ಸಣ್ಣ ವಿರೇಶ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು ತಹಸೀಲ್,ಪುರಸಭೆ, ಬಿಜೆಪಿ, ಕಾಂಗ್ರೆಸ್ ಕಚೇರಿ ಸೇರಿದಂತೆ ನಾನಾ ಸರಕಾರಿ ಶಾಲೆ, ಕಾಲೇಜು, ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು.