ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಣೆ

ದೇವದುರ್ಗ.ನ.೧- ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಕರೊನಾ ನಿಯಮ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ತಾಲೂಕು ಆಡಳಿತದಿಂದ ಭಾನುವಾರ ಸರಳವಾಗಿ ಆಚರಣೆ ಮಾಡಲಾಯಿತು.
ತಹಸೀಲ್ದಾರ್ ಮಧುರಾಜ್ ಯಾಳಗಿ ಕನ್ನಡಾಂಭೆಯ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ಕನ್ನಡದ ನೆಲ ಜಲ ಭಾಷೆ ಉಳಿವಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಪಟಣದ ಸರಕಾರಿ ಸಾರ್ವಜನಿಕ ಆಸ್ಪತೆ ಮುಂಭಾಗದಲ್ಲಿರುವ ಅಟೋ ನಿಲ್ದಾಣದಲ್ಲಿ ಅಟೋ ಚಾಲಕರು ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಣೆ ಮಾಡಿದರು.
ಈಸಂದರ್ಭದಲ್ಲಿ ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್, ನಾಗರನ್ನ ಶಿವಗಂಮ್ಮ ರವಿ,ಶಿವರಾಜ, ಶರಣಬಸವ,ಖಾದರ ಪಾಷಾ,ರಫೀ,ಶಿವಲಿಂಗಪ್ಪ, ರಂಗಪ್ಪ,ಮೆಹೇಶ,ಗುರುನಾಥ ಇಂಗಳದಾಳ, ಸೇರಿದಂತೆ ಇತರರು ಇದ್ದರು.